ನವಲಗುಂದ: ತುಪ್ಪರಿ ಹಳ್ಳದಲ್ಲಿ ಹೆಚ್ಚಿದ ಹರಿವಿನಿಂದಾಗಿ ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದ ಹೊರ ವಲಯದಲ್ಲಿ ಸೃಷ್ಟಿಯಾಗಿದ್ದ ಪ್ರವಾಹದಲ್ಲಿ ಸಿಲುಕಿದ್ದ ರೈತನನ್ನು ತಾಲೂಕು ಆಡಳಿತದಿಂದ ಯಶಸ್ವಿಯಾಗಿ ರಕ್ಷಿಸಲಾಗಿದೆ.
ಬೆಳ್ಳಂಬೆಳಗ್ಗೆ ಹಳ್ಳದ ಹರಿವು ಹೆಚ್ಚುತ್ತಿದ್ದಂತೆ ಶೆಡ್‌ನಲ್ಲಿ ವಾಸವಿದ್ದ ರೈತ ಸೋಮಪ್ಪ ರಂಗಣ್ಣನವರ ಎಂಬುವರು ಶೆಡ್‌ನ ಪಕ್ಕದಲ್ಲೇ ಇರುವ ಹಳೆಯ ಬಾವಿಯೊಂದರ ಮೇಲೆ ಏರಿ ಕೂತಿದ್ದರು. ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ನವಲಗುಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳವು ರೈತ ಸೋಮಪ್ಪ ಅವರನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ತಹಶೀಲ್ದಾರ್ ಅನೀಲ ಬಡಿಗೇರ ಸೇರಿದಂತೆ ತಾಲೂಕಾ ಮಟ್ಟದ ಹಲವು ಅಧಿಕಾರಿಗಳು ಸ್ಥಳದಲ್ಲಿದ್ದರು.
Kshetra Samachara
11/10/2022 02:20 pm