ಕಲಘಟಗಿ: ತಾಲ್ಲೂಕಿನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಗೆ ಹಿಂಡಸಗೇರಿ ಗ್ರಾಮದ ಹತ್ತಿರದ ಕಲಘಟಗಿ ತಡಸ ರಾಜ್ಯ ಹೆದ್ದಾರಿ ರಸ್ತೆ ಜಲಾವೃತ ಗೊಂಡು ರಸ್ತೆ ಸಂಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಉಂಟಾಯಿತು.
ಮಳೆ ನೀರು ಅಪಾಯ ಮಟ್ಟದಿಂದ ಹರಿಯುತ್ತಿರುವದರಿಂದ ಇಲ್ಲಿನ ಸೇತುವೆ ಕೆಳಮಟ್ಟಕ್ಕೆ ಇರುವದರಿಂದ ನೀರು ಸೇತುವೆ ಮೇಲೆ ಹತ್ತಿ ರಸ್ತೆ ಮೂಲಕ ಹರಿಯುತ್ತಿದೆ. ತಾಲ್ಲೂಕಿನ ರಾಮನಾಳ ಗ್ರಾಮದಲ್ಲಿ ಕೂಡಾ ಮಳೆ ನೀರು ಮನೆಗೆ ಹಾಗೂ ರಸ್ತೆಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾದ ಘಟನೆ ಕೂಡಾ ಜರುಗಿದೆ. ಕೆಲವು ಕಡೆ ರೈತರ ಬೆಳೆಗಳಿಗೆ ಮಳೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡು ಬೆಳೆ ಹಾನಿ ಕೂಡಾ ಸಂಭವಿಸಿದೆ. ತಾಲ್ಲೂಕಿನಲ್ಲಿ ಮಳೆರಾಯನ ಆರ್ಭಟ ಇನ್ನು ಮುಂದುವರೆದಿದ್ದು ರೈತ ಸಮುದಾಯದಲ್ಲಿ ಈಗ ಆತಂಕ ಮನೆ ಮಾಡಿದೆ.
ವರದಿ: ಉದಯ ಗೌಡರ
Kshetra Samachara
02/10/2022 10:18 pm