ಅಣ್ಣಿಗೇರಿ: ಕಳೆದ ಎಂಟು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮನೆಗಳು ಕುಸಿಯುತ್ತಲೇ ಇವೆ. ಪಟ್ಟಣದ ಹೊರಕೇರಿ ಓಣಿಯ ನಿವಾಸಿಯೊಬ್ಬರ ಮನೆಯ ಮೇಲ್ಛಾವಣಿ ಬಿದ್ದಿದ್ದರಿಂದ ಮನೆಯಲ್ಲಿದ್ದ ಎರಡು ಬೈಕ್‌ಗಳು ಸಹ ಮಣ್ಣಲ್ಲಿ ಸಿಲುಕಿಕೊಂಡಿದ್ದವು.
ಇನ್ನೂ ಬೈಕ್‌ಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಓಣಿಯ ಯುವಕರು ಸಹಾಯದಿಂದ ಎರಡು ಬೈಕ್‌ಗಳನ್ನು ಆಚಿ ತೆಗೆಯಲಾಯಿತು ಎಂದು ತಿಳಿದು ಬಂದಿದೆ. ಮಣ್ಣು ಬಿದ್ದ ರಭಸಕ್ಕೆ ಬೈಕುಗಳಿಗೆ ಪೂರ್ತಿ ಮಣ್ಣು ಮೆತ್ತಿಕೊಂಡಿರುತ್ತದೆ.
Kshetra Samachara
10/09/2022 11:19 am