ಅಣ್ಣಿಗೇರಿ: ವರುಣನ ಅಬ್ಬರ, ಉಕ್ಕಿ ಹರಿದ ಹಳ್ಳಕೊಳ್ಳ ಅದೇಷ್ಟೋ ಕುಟುಂಬಗಳನ್ನ ಬೀಗಿದೆ ತಂದು ನಿಲ್ಲಿಸಿದೆ. ಅದರಲ್ಲೂ ನಡುರಾತ್ರಿ ಹಳ್ಳದ ನೀರು ನುಗ್ಗಿದ ಪರಿಣಾಮ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಜನ ದಿಕ್ಕೆಟ್ಟು ಹೋದರು. ಜೀವ ಉಳಿಸಿಕೊಳ್ಳಲು ಬದುಕಿಗೆ ಬೇಕಾದ ಬಟ್ಟೆಬರೆ, ದಿನಸಿ, ಕಾಳುಕಡಿಯನ್ನ ಮನೆಯಲ್ಲೇ ಬಿಟ್ಟು ಹೊರ ಬಂದರು.
ದೊಡ್ಡ ಹಳ್ಳಕ್ಕೆ ಸಮೀಪದಲ್ಲೇ ಇರುವ ಶಲವಡಿ ಗ್ರಾಮದ ನಾಗಲಿಂಗೇಶ್ವರ ನಗರಕ್ಕೆ ಪ್ರವಾಹದ ಬಿಸಿ ತಟ್ಟಿದೆ. ಪುಟ್ಟ ಪುಟ್ಟ ಮನೆಗಳಿರುವ ಇಲ್ಲಿನ ಜನರು ಅಷ್ಟೇನು ಇದ್ದವರಲ್ಲ. ಹಳ್ಳದ ನೀರು ನುಗ್ಗಿದ ಪರಿಣಾಮ ಬದುಕು ದುಸ್ತರವಾಗಿ ನಿಂತಿದೆ. ಸದ್ಯ ನೆರೆ ಸಂತ್ರಸ್ತರಿಗಾಗಿ ಗ್ರಾಮ ಪಂಚಾಯತಿಯಿಂದ ತಂಗಲು ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ.
ಮತ್ತೆ ಮನೆಗೆ ಹೋಗಿ ಹೊಸ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ. ನೀರಿನ ರಭಸಕ್ಕೆ ಮನೆ ಸಡಿಲಗೊಂಡಿವೆ. ಮಕ್ಕಳ ಮಾರ್ಕ್ಸ್ ಕಾರ್ಡ್ ಹಸಿಯಾಗಿವೆ. ದಿನಸಿ, ಕಾಳುಕಡಿ ನೀರು ಪಾಲಾಗಿವೆ. ನಮಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಆದಷ್ಟುವೇಗ ನೆರವು ನೀಡಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
Kshetra Samachara
06/09/2022 09:05 pm