ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಳಿವಿನಂಚಿನಲ್ಲಿರೋ ಗುಬ್ಬಚ್ಚಿಗಳಿಗೆ ದೇಗುಲವೇ ಆಸರೆ: ಬನ್ನಿ ಮರದಲ್ಲಿ ಆಕರ್ಷಿಸುತ್ತಿರುವ ಚಿಲಿಪಿಲಿ ನಿನಾದ

ಕುಂದಗೋಳ: ಆಧುನಿಕತೆ ಹೆಚ್ಚಿದಂತೆ ತಂತ್ರಜ್ಞಾನ ಮುಂದುವರಿದಂತೆ ಅದರಲ್ಲೂ ಈ ಮೊಬೈಲ್ ಬಂದ್ಮೇಲಂತೂ ನಮ್ಮ ಕಿವಿಗಳಿಗೆ ಚಿಲಿ ಪಿಲಿ ಗುಬ್ಬಿಗಳ ಸದ್ದು ಕೇಳೋದೇ ಅಪರೂಪವಾಗಿದೆ. ಹಾಗೇ ಗುಬ್ಬಿಗಳ ಸಂತತಿಯೂ ಅಪರೂಪವೇ ಆಗಿವೆ.

ಆದ್ರೆ ಇಲ್ಲೊಂದು ಪಟ್ಟಣದಲ್ಲಿ ಅದೂ ಕೂಡಾ ಜನಜಂಗುಳಿ ಇರುವ ಮಾರ್ಕೆಟ್ ಪ್ರದೇಶದಲ್ಲಿ ನಿತ್ಯ ಸಾವಿರಾರು ಗುಬ್ಬಿಗಳು ನೋಡುಗರಿಗೆ ಕಾಣ ಸಿಗುತ್ತವೆ. ಹೌದು… ಕುಂದಗೋಳ ಪಟ್ಟಣದ ಬಣ್ಣಿ ಕಾಳಿಕಾಂಬಾ ದೇವಸ್ಥಾನದ ಬನ್ನಿ ಮರದಲ್ಲಿ ಸಾಲು ಸಾಲು ಗುಬ್ಬಚ್ಚಿಗಳನ್ನ ನೋಡಬಹುದು. ಅವುಗಳ ಚಿಲಿಪಿಲಿ ಸದ್ದನ್ನ ಕೇಳಿಸಿಕೊಳ್ಳಬಹುದು. ಒಂದೇ ಮರದಲ್ಲಿ ಇಷ್ಟೊಂದು ಗುಬ್ಬಚ್ಚಿಗಳನ್ನು ನೋಡೋಕೆ ಖುಷಿಯಾಗುತ್ತೆ.

ಇನ್ನೂ ಪಕ್ಕದಲ್ಲೇ ಆಂಜನೇಯ ದೇವಸ್ಥಾನ ಇದ್ದು ದೇವಸ್ಥಾನದ ಸುತ್ತ ಹಲವಾರು ಮಳಿಗೆ ಇರುವ ಕಾರಣ ಮಳಿಗೆ ಮಾಲೀಕರೇ ಈ ಗುಬ್ಬಚ್ಚಿಗಳಿಗೆ ಅಕ್ಕಿ, ರಾಗಿ, ಜೋಳದ ಕಾಳು, ನೀರನ್ನು ಕೊಡುತ್ತಾರೆ.

ಕಳೆದ ನಾಲ್ಕು ವರ್ಷದ ಹಿಂದೆ ಈ ಬನ್ನಿ ಸಸಿಯನ್ನು ಇಲ್ಲಿ ಪೂಜೆಗಾಗಿ ನೆಡಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಗುಬ್ಬಚ್ಚಿ ಸಂತತಿ ಹೆಚ್ಚುತ್ತಲೇ ಇದ್ದು ಯುಗಾದಿ, ಶ್ರಾವಣ ದಿನಗಳಲ್ಲಿ ಈ ಗುಬ್ಬಚ್ಚಿಗಳ ಸಂಖ್ಯೆ ದುಪ್ಪಟ್ಟಾಗಿ ಇಲ್ಲಿ ನೋಡುಗರಿಗೆ ಸಿಗುತ್ತವೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Somashekar
Kshetra Samachara

Kshetra Samachara

06/08/2022 02:53 pm

Cinque Terre

17.79 K

Cinque Terre

2

ಸಂಬಂಧಿತ ಸುದ್ದಿ