ಹುಬ್ಬಳ್ಳಿ:ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳದಲ್ಲಿ ಒಂದಾಗಿರುವ ನೃಪತುಂಗ ಬೆಟ್ಟದಲ್ಲಿ ಹೆಬ್ಬಾವಿನ ಮರಿಯೊಂದು ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಆತಂಕಕ್ಕೇ ಇಡಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಕೂಡಲೇ ಸ್ಥಳೀಯರು ಊರಗತಜ್ಞ ಸಂಗಮೇಶ ಅವರಿಗೆ ಮಾಹಿತಿ ತಿಳಿಸಿದ್ದೇ ತಡ ನೃಪತುಂಗ ಬೆಟ್ಟಕ್ಕೆ ಭೇಟಿ ನೀಡಿದ ಸಂಗಮೇಶ ಹೆಬ್ಬಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.ಇದು "ರಾಕ್" ತಳಿಯ ಹೆಬ್ಬಾವಿನ ಮರಿಯಾಗಿದ್ದು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಕಂಡು ಬರುತ್ತದೆ.
ಆದ್ರೆ ಈ ಹೆಬ್ಬಾವು ಇಲ್ಲಿಗೆ ಬಹುಶಃ ರೇವಡಿಹಾಳದಿಂದ ನ್ರಪತುಂಗ ಬೆಟ್ಟಕ್ಕೆ ಮಣ್ಣನ್ನು ತಂದ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿ ಬಂದಿರಬಹುದು,ನಾನು ಕೂಡಾ 17 ವರ್ಷದಲ್ಲಿ ಇದೆ ಮೊದಲ ಬಾರಿ ಹುಬ್ಬಳ್ಳಿಯಲ್ಲಿ ಹೆಬ್ಬಾವು (ಮರಿ) ಕಂಡಿದ್ದು ಅಂತಾ ಸ್ಥಳೀಯರಿಗೆ ಮಾಹಿತಿಯನ್ನು ನೀಡಿದರು.
ನಂತರ ಹೆಬ್ಬಾವಿನ ಮರಿಯನ್ನು ಸಂರಕ್ಷಣೆ ಮಾಡಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುವ ಕಾರ್ಯವನ್ನು ಸಂಗಮೇಶ ಮಾಡಿದ್ದಾರೆ.
Kshetra Samachara
31/07/2022 12:22 pm