ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮನೆಗೆ ಬಂದ 'ನಾಗಪ್ಪ' ; ಬಸಪ್ಪ ಸಂರಕ್ಷಣೆ, ಸುರಕ್ಷಿತ ತಾಣಕ್ಕೆ ರವಾನೆ

ನವಲಗುಂದ: ನವಲಗುಂದ ತಾಲ್ಲೂಕಿನ ಚಿಲಕವಾಡ ಗ್ರಾಮದ ಜೀವಪ್ಪ ಬಳಿಗೆರೆ ಎಂಬುವವರ ಮನೆಯಲ್ಲಿ ಏಕಾಏಕಿ ನಾಗರಹಾವು ಪ್ರತ್ಯಕ್ಷಗೊಂಡ ಹಿನ್ನೆಲೆ ಆತಂಕಗೊಂಡ ಕುಟುಂಬಸ್ಥರು ಉರಗ ರಕ್ಷಕ ಬಸವರಾಜ ಹಡಪದ ಎಂಬವವರನ್ನು ಕರೆಯಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರಲಾಯಿತು.

ಕಳೆದ ಸುಮಾರು 12 ವರ್ಷಗಳಿಂದ ಹಾವುಗಳನ್ನು ರಕ್ಷಿಸುತ್ತಾ ಬಂದಿರುವ ತಾಲ್ಲೂಕಿನ ಹಣಸಿ ಗ್ರಾಮದ ಬಸವರಾಜ ಹಡಪದ ಅವರು ಜೀವನಕ್ಕಾಗಿ ಕೃಷಿ ಕೆಲಸವನ್ನು ಅವಲಂಬಿಸಿದ್ದಾರೆ. ಯಾವುದೇ ಹಣವನ್ನು ಪಡೆಯದೇ ಹಾವಿನ ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಸಂರಕ್ಷಣೆಗೆ ಮುಂದಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/07/2022 08:19 pm

Cinque Terre

17.4 K

Cinque Terre

0

ಸಂಬಂಧಿತ ಸುದ್ದಿ