ಕಲಘಟಗಿ: ಕಲಘಟಗಿ ತಾಲೂಕಿನಲ್ಲಿ ಮಳೆಗಾಲ ಬಂದರೆ ಸಾಕು ಹಸಿರು ತೋರಣ ಕಟ್ಟಿದಂತೆ ಕಾಣುತ್ತದೆ. ಮಲೆನಾಡಿಗೆ ಹೊಂದಿಕೊಂಡಿರುವ ಕಲಘಟಗಿ ತಾಲೂಕಿನಲ್ಲಿ ಮಳೆಗಾಲ ಬಂದರೆ ರೈತರ ಮೊಗದಲ್ಲಿ ಮಂದ ಹಾಸ ಕಾಣುತ್ತದೆ. ತಾಲೂಕಿನಲ್ಲಿ ಭತ್ತ, ಸೋಯಾ ಕಬ್ಬು ಗೋವಿನ ಜೋಳ ಇನ್ನು ಮುಂತಾದ ಬೆಳೆ ಬೆಳೆಯುತ್ತಿರುವ ರೈತರಿಗೆ ನಿರಂತರ ಮಳೆ ಸಂತಸ ತಂದಿದೆ.
ತಾಲೂಕಿನಲ್ಲಿ ಎತ್ತ ನೋಡಿದರತ್ತ ಕಾಣುವ ಹಸಿರ ಹೊಲಗಳು ಪ್ರಕೃತಿಯ ಮಡಿಲಿಗೆ ಹೋದಂತೆ ಭಾಸವಾಗುತ್ತದೆ. ಆದರೆ ಈ ಮಳೆಯು ಅತಿಯಾಗಿ ಸುರಿದರೆ ಕಬ್ಬು ಹಾಗೂ ಭತ್ತ ಬೆಳೆಗಾರರನ್ನು ಹೊರತು ಪಡಿಸಿದರೆ ಇನ್ನುಳಿದ ಬೆಳೆಗಳನ್ನು ಬೆಳೆದ ರೈತರಿಗೆ ಸಂಕಷ್ಟಕ್ಕೆ ಈಡುಮಾಡುವುದಂತು ಸತ್ಯ.
ವರದಿ: ಉದಯ ಗೌಡರ
Kshetra Samachara
11/07/2022 12:26 pm