ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಆಸ್ಪತ್ರೆ ಆವರಣದಲ್ಲಿ ಕಂಬದ ಮೇಲೆ ಉರುಳಿದ ಮರ, ತಪ್ಪಿದ ಅವಘಡ

ನವಲಗುಂದ : ಕಳೆದ ವಾರದಿಂದ ಬಿಟ್ಟು ಬಿಡದೆ ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಗಾಳಿ ಮಳೆ ಸುರಿಯುತ್ತಿದೆ. ಈ ಹಿನ್ನಲೆ ಭಾನುವಾರ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಬಳಿ ಇದ್ದ ಬೃಹತ್ ಗಾತ್ರದ ಮರ ನೆಲಕ್ಕಚ್ಚಿದೆ. ಇದರಿಂದ ವಿದ್ಯುತ್ ಕಂಬವೊಂದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ಎಸ್... ದಿನಕ್ಕೆ ನೂರಾರು ಜನ ಬರುವ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿದ್ದ ಬೃಹತ್ ಗಾತ್ರದ ಮರ ಇಂದು ಮಧ್ಯಾಹ್ನ ಗಾಳಿ ಮಳೆಗೆ ಕಂಬದ ಮೇಲೆ ಬಿದ್ದಿದೆ. ಈ ಸಮಯದಲ್ಲಿ ಸ್ಥಳದಲ್ಲಿ ಯಾರು ಇಲ್ಲದ ಹಿನ್ನೆಲೆ ಸಂಭವಿಸಲಿದ್ದ ಅವಘಡ ತಪ್ಪಿದೆ.

ಇನ್ನು ಸ್ಥಳಕ್ಕೆ ನವಲಗುಂದ ಸೆಕ್ಷನ್ ಆಫೀಸರ್ ಸಿ. ವೈ ಬಾವಿಕಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ, ನೂತನ ಕಂಬ ಅಳವಡಿಸುವ ಕೆಲಸ ನಡೆಸಿದ್ದಾರೆ. ಘಟನೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಸಂಜೆ ಸುಮಾರು 5 ಗಂಟೆಯ ವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ತಿಳಿಸಿದ್ದಾರೆ.

-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

10/07/2022 04:44 pm

Cinque Terre

110.81 K

Cinque Terre

0

ಸಂಬಂಧಿತ ಸುದ್ದಿ