ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎರಡನೇ ದಿನವೂ ಮುಂದುವರಿದ ವರುಣಾರ್ಭಟ: ಪುಳಕಗೊಂಡ ರೈತ ಸಮುದಾಯ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎರಡನೇ ದಿನವಾದ ಇಂದು ವರುಣನ ಆರ್ಭಟ ಮುಂದುವರಿದಿದೆ. ಮಳೆಯಿಂದಾಗಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವಿದ್ಯಾನಗರ, ಗಿರಣಿಚಾಳ, ಮೂರುಸಾವಿರ ಮಠ, ವಿಕ್ಟೋರಿಯಾ ರಸ್ತೆ ಸೇರಿದಂತೆ ಕೆಲವೆಡೆ ತೊಂದರೆಯಾಯಿತು.

ಇನ್ನೂ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಲ್ಲಿ ನೆನೆದುಕೊಂಡೇ ಹೋಗುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂದವು.

ಕೆಲ ದಿನಗಳಿಂದ ಬಿತ್ತನೆಯಾದರೂ ಸುರಿಯದ ಮಳೆಯಿಂದಾಗಿ ಚಿಂತೆಗೀಡಾಗಿದ್ದ ರೈತರು, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂತಸಗೊಂಡರು. ಜೊತೆಗೆ, ಹೊಲಗಳಲ್ಲಿ ಬಿತ್ತನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳು ಬಿರುಸುಗೊಂಡವು.

Edited By :
Kshetra Samachara

Kshetra Samachara

05/07/2022 11:43 am

Cinque Terre

98.89 K

Cinque Terre

2

ಸಂಬಂಧಿತ ಸುದ್ದಿ