ಧಾರವಾಡ: ನಿನ್ನೆಯಿಂದ ಧಾರವಾಡದಲ್ಲಿ ಮತ್ತೆ ಮಳೆ ಆರಂಭಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಜೂನ್ ತಿಂಗಳು ಮುಗಿಯುತ್ತಾ ಬಂದಿದ್ದು, ಬಿತ್ತನೆಯಾದ ನಂತರ ಸಮರ್ಪಕ ಮಳೆಯಾಗಿರಲಿಲ್ಲ. ನಿನ್ನೆಯಿಂದ ಮತ್ತೆ ಮಳೆರಾಯ ಕರುಣೆ ತೋರಿದ್ದು, ರೈತರು ಕೊಂಚ ಉಸಿರಾಡುವಂತಾಗಿದೆ. ಇಂದು ಬೆಳಿಗ್ಗೆ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಳೆ ಸುರಿದು ತನ್ನ ಇರುವಿಕೆಯನ್ನು ತೋರ್ಪಡಿಸಿದೆ.
Kshetra Samachara
22/06/2022 04:05 pm