ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆ ಮೇಲೆ ಉರುಳಿದ ಮರ; ಕೊನೆಗೂ ಹೆಸ್ಕಾಂ ತೆರವು

ʼಪಬ್ಲಿಕ್ ನೆಕ್ಸ್ಟ್ʼ ವರದಿ ಫಲಶ್ರುತಿ

ಹುಬ್ಬಳ್ಳಿ: ಎರಡು ದಿನಗಳ ಹಿಂದೆ ವಾಣಿಜ್ಯ ನಗರಿಯಲ್ಲಿ ಭಾರಿ ಮಳೆಯಾಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಮರ, ವಿದ್ಯುತ್‌ ತಂತಿ- ಕಂಬಗಳು ನೆಲ ಕಚ್ಚಿದ್ದವು . ಈ ಅವಘಡಕ್ಕೆ ಸಂಬಂಧಿಸಿ ʼಪಬ್ಲಿಕ್ ನೆಕ್ಸ್ಟ್ʼ ಸವಿಸ್ತಾರ ವರದಿ ಬಿತ್ತರಿಸಿತ್ತು. ಆ ಬಳಿಕವಷ್ಟೇ ʼಹೆಸ್ಕಾಂʼ ಧಾವಿಸಿ ಬಂದು ಮರ- ತಂತಿ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಹಾಗೆಯೇ, ನಗರದ ದೇವರಗುಡಿಹಾಳ ರಸ್ತೆಯಲ್ಲಿನ ಸಿಮ್ಲಾನಗರ 3ನೇ ಕ್ರಾಸ್ ಬಳಿಯ ಗಾರ್ಡನ್ ಹತ್ತಿರ ಬೃಹತ್ ಮರವೊಂದು ವಿದ್ಯುತ್ ತಂತಿ ಸಮೇತ ಮನೆ ಮೇಲೆಯೇ ಉರುಳಿತ್ತು. ಒಂದು ದಿನ ಕಳೆದರೂ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಬಂದು ಆ ಮರ ಸಹಿತ ವಿದ್ಯುತ್ ತಂತಿಯನ್ನು ತೆರವುಗೊಳಿಸಲು ಬರಲೇ ಇಲ್ಲ!

ʼಪಬ್ಲಿಕ್ ನೆಕ್ಸ್ಟ್ʼ ನಲ್ಲಿ ವರದಿ ಅನಾವರಣಗೊಂಡ ಕೂಡಲೇ ಎಚ್ಚೆತ್ತುಕೊಂಡ ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿ ಸಹಿತ ಸ್ಥಳಕ್ಕೆ ಧಾವಿಸಿ, ಮನೆ ಮೇಲೆ ಬಿದ್ದಿದ್ದ ಮರ ಮತ್ತು ವಿದ್ಯುತ್ ತಂತಿಯನ್ನು ತೆರವುಗೊಳಿಸಿದರು. ಆ ನಂತರವಷ್ಟೇ ನಿಟ್ಟುಸಿರು ಬಿಟ್ಟ ಮನೆಯವರು, ʼಪಬ್ಲಿಕ್ ನೆಕ್ಸ್ಟ್ʼ ಗೆ ಅಭಿನಂದನೆ ಸಲ್ಲಿಸಲು ಮರೆಯಲಿಲ್ಲ.

- ಈರಣ್ಣ ವಾಲಿಕಾರ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ

Edited By : Nagesh Gaonkar
Kshetra Samachara

Kshetra Samachara

05/06/2022 09:54 pm

Cinque Terre

36.79 K

Cinque Terre

3

ಸಂಬಂಧಿತ ಸುದ್ದಿ