ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಸುರೇಶ್ ಹತ್ತಿ ಎಂಬುವವರ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಅವಿತುಕೊಂಡಿದ್ದ ಹಾವೊಂದು ಕೊನೆಗೂ ಸೆರೆ ಸಿಕ್ಕಿದೆ.
ಗುರುವಾರ ಸಾಯಂಕಾಲ ಸುರಿದ ಮಳೆಯ ಸಂದರ್ಭ ಹೊರಗಡೆಯಿಂದ ಮನೆಗೆ ನುಗ್ಗಿದ ನಾಗರಹಾವು ಕಳೆದ ಮೂರು ದಿನಗಳಿಂದ ಮನೆಯಲ್ಲಿ ಅವಿತುಕೊಂಡಿತ್ತು. ಭಯದಿಂದ ಮೂರು ದಿನ ಪಕ್ಕದ ಮನೆಯಲ್ಲಿ ಕಾಲ ಕಳೆದಿದ್ದ ಕುಟುಂಬದವರು ಇಂದು ಉರಗ ರಕ್ಷಕ ಸಂಗಮೇಶ್ ಮಾಹಿತಿ ನೀಡಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ರಕ್ಷಕ ಹಾವನ್ನು ಹುಡುಕಿ ಸೆರೆ ಹಿಡಿದು ಸಂರಕ್ಷಣೆ ಮಾಡಿ ಕಾಡಿಗೆ ಬಿಡಲು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಹಾವು ಸೆರೆ ಸಿಕ್ಕಿದ್ದರಿಂದ ಕುಟುಂಬಸ್ಥರು ನಿರಾಳರಾಗಿದ್ದಾರೆ.
Kshetra Samachara
05/06/2022 11:11 am