ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಜನರಿಗೆ ನೂರೊಂದು ಸಮಸ್ಯೆ: ವರುಣನ ಅಬ್ಬರಕ್ಕೆ ತಬ್ಬಿಬ್ಬಾದ ಜನರು...!

ಹುಬ್ಬಳ್ಳಿ: ಮಳೆ ಬಂದರೇ ಸಾಕು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳು ಉದ್ಬವಿಸುತ್ತಲೇ ಇವೆ. ಚರಂಡಿ ಸಮಸ್ಯೆ, ಮಳೆಗಾಳಿಗೆ ಮೇಲ್ಛಾವಣಿ ಹಾರಿ ಹೋಗುವುದು ಹಾಗೂ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ನಿಜಕ್ಕೂ ಜನರನ್ನು ಹೈರಾಣ ಮಾಡುತ್ತಿವೆ.

ಇಲ್ಲಿನ‌ ಹಳೇ ಹುಬ್ಬಳ್ಳಿಯ ಸಾದರಸೋಪಾ ಎದುರಿನಲ್ಲಿರುವ ಕಾಳಮ್ಮ ದೇವಸ್ಥಾನ ಹತ್ತಿರ ಮಳೆಯಿಂದ ಶಾಟ್ ಸರ್ಕ್ಯೂಟ್ ಆಗಿ ವಿದ್ಯುತ್ ಕೇಬಲ್ ಸುಟ್ಟು ಹೋಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯೇ ನಿಲ್ಲಿಸಿದ್ದ ವಾಹನಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಹೀಗಾಗಿ ಜನರು ಆತಂಕಗೊಂಡಿದ್ದಾರೆ. ಒಂದು ಕಡೆ ಆದ್ರೆ ಉಣಕಲ್ ಭಾಗದಲ್ಲಿ ಮಳೆ-ಗಾಳಿಯಿಂದ ಮನೆಯ ವಸ್ತುಗಳು‌ ಹಾಗೂ ಇನ್ನಿತರ ವಸ್ತುಗಳು ಗಾಳಿಗೆ ಹಾರಿ ಹೋಗಿವೆ. ಆರಂಭದಲ್ಲಿಯೇ ಹೀಗಾದರೆ ಹೇಗೆ ಎಂಬ ಚಿಂತಾಜನಕ ಸ್ಥಿತಿಯಲ್ಲಿ ಜನರು ಜೀವನ ನಡೆಸುವಂತಾಗಿದೆ.

ಇನ್ನೂ ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜನರು ಮುಂಗಾರು ಮಳೆಯ ಆರಂಭದಲ್ಲಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಒಂದೆರಡು ವಾರಗಳ ಹಿಂದೆಷ್ಟೆ ಅಕಾಲಿಕ‌ ಮಳೆಯಿಂದ ತತ್ತರಿಸಿ ಹೋಗಿದ್ದ ಜನರು ಈಗ ಮುಂಗಾರು ಮಳೆ ಆಗಮನದಲ್ಲಿಯೇ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.

ಒಟ್ಟಿನಲ್ಲಿ ವರುಣನ ಅಬ್ಬರಕ್ಕೆ ವಾಣಿಜ್ಯನಗರಿ ಜನರು ತಬ್ಬಿಬ್ಬಾಗಿದ್ದು, ಮಳೆ ಅವಾಂತರದಿಂದ ಜನಜೀವನ ಅತಂತ್ರವಾಗಿದೆ.

Edited By : Manjunath H D
Kshetra Samachara

Kshetra Samachara

03/06/2022 08:11 am

Cinque Terre

17.41 K

Cinque Terre

1

ಸಂಬಂಧಿತ ಸುದ್ದಿ