ಧಾರವಾಡ: ಚಂಡಮಾರುತ ಹವಾಮಾನ ವೈಪರಿತ್ಯದಿಂದ ಧಾರವಾಡದಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ಇದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಅಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ಕೆಲ ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ, ಸುಮಾರು 50 ಕ್ಕೂ ಹೆಚ್ಚು ಮನೆಗಳು ಭಾಗಶಃ ಧರೆಗುರುಳಿವೆ.
ಇಂದು 13 ಮನೆಗಳು ಭಾಗಶಃ ಬಿದ್ದಿದ್ದು, ಕುಂದಗೋಳದಲ್ಲಿ ನಿನ್ನೆ ರಾತ್ರಿ 18 ಹಾಗೂ ನವಲಗುಂದದಲ್ಲಿ 12 ಮನೆಗಳು ಹಾನಿಯಾಗಿವೆ.
ನಿನ್ನೆ ರಾತ್ರಿಯಿಂದಲೇ ಆರಂಭವಾಗಿರುವ ಮಳೆ ಬಿಟ್ಟೂ ಬಿಡದೇ ಸುರಿಯುತ್ತಿದೆ. ಮಳೆಯ ಪರಿಣಾಮ ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಮುಂಗಾರು ಪ್ರವೇಶಕ್ಕೂ ಮುನ್ನವೇ ಚಂಡಮಾರುತ ಎಫೆಕ್ಟ್‌ನಿಂದಾಗಿ ಮಳೆ ಸುರಿಯುತ್ತಿದೆ.
Kshetra Samachara
19/05/2022 08:47 pm