ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವರುಣನ ಅಬ್ಬರಕ್ಕೆ ಹಳ್ಳಿಗಳಲ್ಲಿ 25 ಮನೆಗಳು ಭಾಗಶಃ ಹಾನಿ

ಕುಂದಗೋಳ : ಕಳೆದ ಕೆಲ ದಿನಗಳಿಂದ ಎಲ್ಲೇಡೆ ಅಬ್ಬರಿಸಿ ಬೊಬ್ಬಿರಿದ ಮಳೆ ಗಾಳಿಯ ರಭಸಕ್ಕೆ ಕುಂದಗೋಳ ತಾಲೂಕಿನಲ್ಲಿ ಒಟ್ಟು 25 ಮನೆಗಳು ಭಾಗಶಃ ಹಾನಿಯಾಗಿವೆ.

ಅತೀಯಾದ ಮಳೆಯಿಂದಾಗಿ ಕುಂದಗೋಳ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಏಪ್ರೀಲ್ ತಿಂಗಳಲ್ಲಿ 7 ಹಾಗೂ ಮೇ ತಿಂಗಳಲ್ಲಿ 7 ಮನೆಗಳು ಹಾನಿಯಾಗಿವೆ, ಇನ್ನೂ ಸಂಶಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೇ ತಿಂಗಳಲ್ಲಿ 9 ಮನೆಗಳು ಹಾನಿಯಾಗಿವೆ.

ಈಗಾಗಲೇ ಮಳೆ ಗಾಳಿ ರಭಸಕ್ಕೆ ಹಾನಿಯಾದ ಮನೆಗಳನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ನೀರಿಕ್ಷಕರು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕರ್ತವ್ಯ ಪ್ರಗತಿಯಲ್ಲಿದ್ದು, ಮಳೆ ಗಾಳಿ ಮಳೆ ರಭಸಕ್ಕೆ ಮನೆ ಕಳೆದುಕೊಂಡವರು ಸೂರು ಭದ್ರ ಮಾಡಿಕೊಳ್ಳಲು ಸರ್ಕಾರದ ಪರಿಹಾರಕ್ಕೆ ಅಂಗಲಾಚುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

13/05/2022 07:45 am

Cinque Terre

55.07 K

Cinque Terre

0

ಸಂಬಂಧಿತ ಸುದ್ದಿ