ಹುಬ್ಬಳ್ಳಿ: ಎರಡನೇ ದಿನವೂ ಹುಬ್ಬಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿದಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ಹಲವೆಡೆ ಮರಗಳು ಧರೆಗೆ ಉರುಳಿವೆ. ಮಾಜಿ ಸಿಎಂ ಮನೆಯ ಆವರಣದಲ್ಲಿಯೇ ಸಂಭವಿಸಬಹುದಾದ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ.
ಹೌದು..ಮಾಜಿ ಸಿಎಂ ಜಗದೀಶ ಶೆಟ್ಟರ ಮನೆ ಎದುರು ಮರವೊಂದು ಧರೆಗೆ ಉರುಳಿದೆ. ಜಗದೀಶ ಶೆಟ್ಟರ್ ಪೊಲೀಸ್ ಬೆಂಗಾವಲು ವಾಹನದ ಮೇಲೆಯೇ ಮರ ಉರುಳಿ ಬಿದ್ದಿರುವ ಪರಿಣಾಮ ವಾಹನ ಜಖಂಗೊಂಡಿದೆ. ಅದೃಷ್ಟವಶಾತ್ ಪೊಲೀಸ್ ಜೀಪ್‌ನಲ್ಲಿದ್ದ ಚಾಲಕ ಪಾರಾಗಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಬೃಹತ್ ಗಾತ್ರದ ಮರಗಳು ನೆಲಕ್ಕೆ ಬಿದ್ದಿವೆ.
ಒಟ್ಟಿನಲ್ಲಿ ವರುಣನ ಆಗಮನ ಹುಬ್ಬಳ್ಳಿಯ ಜನರಲ್ಲಿ ಹರ್ಷದ ಹೊನಲಿಗಿಂತ ಕಷ್ಟದ ಕಂಬನಿ ಸುರಿಸಲು ಸಿದ್ಧವಾದಂತೆ ಕಾಣುತ್ತಿದ್ದು, ಜನರು ಎಚ್ಚರಿಕೆಯಿಂದಲೇ ಓಡಾಡಬೇಕಿದೆ.
Kshetra Samachara
05/05/2022 06:34 pm