ಹುಬ್ಬಳ್ಳಿ: ನಿನ್ನೆ ಸಂಜೆ ಏಕಾಏಕಿ ಸುರಿದ ಮಳೆ ನಿಜಕ್ಕೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಅನಾಹುತ ಸೃಷ್ಟಿಸಿದೆ. ಬಿಸಿಲಿನ ತಾಪದಿಂದ ತಣ್ಣಾಗಗಲು ಬಯಸಿದ್ದ ಜನ ಮಳೆಯ ಹೊಡೆತಕ್ಕೆ ಕಂಗಾಲಾಗಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರ, ದೇಸಾಯಿ ಸರ್ಕಲ್, ಹಳೇ ಹುಬ್ಬಳ್ಳಿ, ಗುಡ್ ಶೆಡ್ ರೋಡ್, ಗ್ಲಾಸ್ ಹೌಸ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಉರುಳಿದ್ದು, ವಿದ್ಯಾನಗರ ಹಾಗೂ ದೇಶಪಾಂಡೆನಗರದಲ್ಲಿ ದೊಡ್ಡಮಟ್ಟದ ಅನಾಹುತ ನಡೆದಿದ್ದು, ಸುಮಾರು ವಾಹನಗಳು ಜಖಂಗೊಂಡಿದೆ.
ಇನ್ನೂ ಕೆಲವೊಂದು ಕಡೆಗಳಲ್ಲಿ ಶಾಟ್ ಸರ್ಕ್ಯೂಟ್ ಆಗಿದೆ. ಅಲ್ಲದೇ ಕೆಲವೊಂದು ಮನೆಯ ಮೇಲ್ಚಾವಣಿ ಬಿದ್ದು, ಅಪಘಾತ ಸಂಭವಿಸಿದೆ. ಆದರೆ ವರುಣನ ವಕ್ರ ದೃಷ್ಟಿಯಿಂದ ಹುಬ್ಬಳ್ಳಿಯ ಜನರು ಪರದಾಡುವಂತಾಗಿದೆ. ಒಟ್ಟಿನಲ್ಲಿ ವರುಣನ ಅವಾಂತರಕ್ಕೆ ಹುಬ್ಬಳ್ಳಿಯ ಜನರು ಮಾತ್ರ ಹಿಡಿಶಾಪ ಹಾಕಿದ್ದು, ಅದೆಷ್ಟೋ ಜನರ ವಾಹನ ಜಖಂಗೊಂಡಿದೆ.
Kshetra Samachara
05/05/2022 11:20 am