ಅಣ್ಣಿಗೇರಿ: ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವೆಂಕಟೇಶ್ವರ ನಗರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನದಿಯಂತೆ ಹರಿಯುತ್ತಿದೆ.ಇದರಿಂದಾಗಿ ನಿವಾಸಿಗಳಿಗೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.ಸಾಯಂಕಾಲ ಪ್ರಾರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಹೆಚ್ಚು ಮಳೆ ಸುರಿದಿರುತ್ತದೆ. ಇನ್ನೂ ಮಳೆಯಿಂದಾಗಿ ಗಟಾರು ತುಂಬಿಕೊಂಡು ಗಟರ್ ನ ನೀರು ಸಹ ಕೆಲವೊಂದಿಷ್ಟು ಮನೆಗಳ ಒಳಗೆ ನುಗ್ಗಿರುತ್ತದೆ.
ಅತಿಯಾದ ಮಳೆ ಗಾಳಿಗೆ ಪಟ್ಟಣದ ಕೆಲವೊಂದಿಷ್ಟು ಮನೆಗಳಿಗೆ ಹಾನಿ ಆಗಿರುತ್ತದೆ ಎಂದು ತಿಳಿದು ಬಂದಿರುತ್ತದೆ.
Kshetra Samachara
29/04/2022 08:45 am