ಧಾರವಾಡ: ಧಾರವಾಡ ಕಮಲಾಪುರದ ಈಶ್ವರ ಗುಡಿ ಓಣಿಯಲ್ಲಿ ಏಕ ಕಾಲಕ್ಕೆ ಮೂರು ಕೆರೆ ಹಾವುಗಳು ಕಂಡು ಬಂದಿದ್ದು, ಅವುಗಳನ್ನು ಮಂಜುನಾಥ ಭಜಂತ್ರಿ ಎಂಬುವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಕೆರೆ ಹಾವುಗಳನ್ನು ಕಂಡು ಜನರು ಆತಂಕಗೊಂಡು ಸ್ನೇಕ್ ಮಂಜುನಾಥ ಭಜಂತ್ರಿಯವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ನೇಕ್ ಮಂಜುನಾಥ ಭಜಂತ್ರಿ ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Kshetra Samachara
20/04/2022 07:05 pm