ಹುಬ್ಬಳ್ಳಿ: ಜೀವ ಸಂಕುಲದ ವಿಶೇಷ ಹಾಗೂ ವೈಶಿಷ್ಟ್ಯತೆಗಳು ಎಂಥವರನ್ನು ಕೂಡ ಅಚ್ಚರಿಗೆ ಒಳಗಾಗುವಂತೆ ಮಾಡುತ್ತದೆ. ಅಂತೆಯೇ ಹುಬ್ಬಳ್ಳಿಗೆ ಬಂದ ಭಾರೀ ಗಾತ್ರದ ಮೀನು ನೋಡಿದ ಜನರು ಅಚ್ಚರಿಗೆ ಒಳಗಾಗಿದ್ದಾರೆ.
ಹೌದು.. ಹುಬ್ಬಳ್ಳಿಯ ಹೆಗ್ಗೇರಿಯ ಮಾರುತಿನಗರದ ಮೀನು ಮಾರುಕಟ್ಟೆಗೆ ಬಂದ ಭಾರೀ ಗಾತ್ರದ ಮಡೋಸಾ ಮೀನು ನೋಡಿದ ಜನರು ಅಚ್ಚರಿಗೆ ಒಳಗಾಗಿದ್ದು, ಮೀನು ಪ್ರಿಯರಿಂದ ಬೇಡಿಕೆ ಹೆಚ್ಚಿದೆ.
ಇನ್ನೂ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಮಡೋಸಾ ಮೀನು ನೋಡುತ್ತಿದ್ದಂತೆಯೇ ಜನರು ಮೀನು ನೋಡಲು ತಾ ಮುಂದೆ ನಾ ಮುಂದೆ ಎಂಬುವಂತೆ ಮುಗಿಬಿದ್ದಿದ್ರು. ಸುಮಾರು 100 ಕೆಜಿ ಗಿಂತ ಹೆಚ್ಚಿಗೆ ತೂಕ ಇರುವಂತಹ ಮೀನು ಕಾರವಾರ ಸಮುದ್ರದಿಂದ ಹುಬ್ಬಳ್ಳಿಗೆ ತರಲಾಗಿದೆ. ಒಟ್ಟಿನಲ್ಲಿ ಮೀನು ನೋಡುತ್ತಿದ್ದಂತೆಯೇ ಜನರು ಬಾಯಿ ಮೇಲೆ ಬೆರಳಿಟ್ಟುಕೊಂಡು ಅಬ್ಬಾ ಮೀನು ಎಂದಿದ್ದಂತೂ ಸತ್ಯ. ಇಂತಹ ಜೀವ ವೈವಿಧ್ಯತೆ ನಮ್ಮ ಸುತ್ತಮುತ್ತಲಿನಲ್ಲಿರುವುದು ನಿಜಕ್ಕೂ ನಿಸರ್ಗದ ಬಹುದೊಡ್ಡ ಕೊಡುಗೆಯಾಗಿದೆ
Kshetra Samachara
16/04/2022 09:12 pm