ನವಲಗುಂದ : ನವಲಗುಂದ ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸುರಿದ ಮಳೆಗೆ ರೈತ ಕಂಗಾಲಾಗಿದ್ದಾನೆ. ತಾಲೂಕಿನ ಮೊರಬ ಗ್ರಾಮದಲ್ಲಿ ಸುಮಾರು 20 ಲಕ್ಷದಲ್ಲಿ ನಿರ್ಮಾಣ ಮಾಡಿದ್ದ ಪಾಲಿಹೌಸ್ ಗಾಳಿ, ಮಳೆಯ ಹೊಡೆತಕ್ಕೆ ಕಿತ್ತು ಹೋಗಿದೆ.
ಇನ್ನು ತಾಲೂಕಿನ ಮೊರಬ ಗ್ರಾಮದ ಲಿಂಗಪ್ಪ ಜಾಲಿಹಾಳ ಎಂಬುವವರಿಗೆ ಸೇರಿದ್ದ ಪಾಲಿಹೌಸ್ 20 ಗುಂಟೆ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಘಟನೆಯಿಂದ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ರೈತನಿಂದ ಮಾಹಿತಿ ಪಡೆಡಿದ್ದಾರೆ.
Kshetra Samachara
06/04/2022 09:25 am