ಹುಬ್ಬಳ್ಳಿ: ನೆಲದಲ್ಲಿ ಬೃಹತ್ ಗಾತ್ರದ ನಾಗರಹಾವು ಸಿಲುಕಿರುವುದನ್ನು ಕಂಡು ಜನರು ಬೆಚ್ಚಿ ಬಿದ್ದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದಲ್ಲಿ ನಡೆದಿದೆ.
ನದಾಫ್ ಎಂಬುವರ ಮನೆಯ ಮುಂದೆ ಬಣವಿ ಹಾಕಲಾಗಿತ್ತು. ಬಣವಿ ತೆರವುಗೊಳಿಸಿ ನೆಲವನ್ನು ಸರಿಮಾಡಿದರು. ಈ ನೆಲದಲ್ಲಿ ನಾಗರ ಹಾವು ಸಿಲುಕಿಕೊಂಡಿದ್ದನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಹಾವನ್ನು ಕಂಡು ಮನೆಯ ಮಾಲೀಕರು ಉರಗ ತಜ್ಞ ಸ್ನೇಕ ಸಂಗಮೇಶ ಎಂಬುವವರಿಗೆ ಸುದ್ದಿ ಮುಟ್ಟಿಸಿದ್ರು. ಆ ಬಳಿಕ ಸ್ಥಳಕ್ಕೆ ಬಂದ ಉರಗ ತಜ್ಞ ಸಂಗಮೇಶ, ಬೃಹತ್ ಗಾತ್ರದ ನಾಗರ ಹಾವನ್ನು ರಕ್ಷಣೆ ಮಾಡಿದ್ರು. ಈ ಮೂಲಕ ಮನೆಯವರು ಮತ್ತು ಸ್ಥಳೀಯರು ನಿಟ್ಟುಸಿರು ಬಿಟ್ಟರು
Kshetra Samachara
29/03/2022 12:00 pm