ಧಾರವಾಡ: ಧಾರವಾಡದ ಕರ್ನಾಟಕ ಕಾಲೇಜನ್ನು ಕೆಂಪು ಸುಂದರಿ ಎನ್ನಲಾಗುತ್ತದೆ. ಬ್ರಿಟೀಷರ ಕಾಲದ ಈ ಕಟ್ಟಡ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ. ಈ ಕೆಂಪು ಸುಂದರಿ ಇಂದು ಮಂಜು ಹೊದ್ದು ಕಂಗೊಳಿಸುತ್ತಿದ್ದಳು.
ಸದ್ಯ ಬೇಸಿಗೆ ಆರಂಭವಾಗಿದೆ. ಬೇಸಿಗೆ ಆರಂಭದಲ್ಲೇ ವಿದ್ಯಾಕಾಶಿಯ ಕಿರೀಟದಂತಿರುವ ಕರ್ನಾಟಕ ಕಾಲೇಜಿಗೆ ಮಂಜು ಆವರಿಸಿತ್ತು. ಧಾರವಾಡದಾದ್ಯಂತ ಇಂದು ಬೆಳಗಿನಜಾವ ವಾಯುವಿಹಾರಿಗಳು ಇಬ್ಬನಿಯ ತಂಪಿನ ಅನುಭವದೊಂದಿಗೆ ವಾಯು ವಿಹಾರ ಮಾಡಿದ್ದು ಕಂಡು ಬಂತು.
ಕರ್ನಾಟಕ ಕಾಲೇಜು ಆವರಣದಲ್ಲಂತೂ ವಾಯು ವಿಹಾರಿಗಳ ದಂಡೇ ಸೇರಿತ್ತು. ಇಬ್ಬನಿ ತಬ್ಬಿದ ಇಳೆಯಲ್ಲಿ ಮಂಜು ಸೀಳಿಕೊಂಡು ವಾಯು ವಿಹಾರಿಗಳು ವಾಕಿಂಗ್ ಮಾಡಿ ಖುಷಿಪಟ್ಟರು.
Kshetra Samachara
16/03/2022 09:57 am