ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಾರ್ವಜನಿಕರಿಗೆ ತಲೆನೋವಾಗಿದ್ದ ಕೋತಿಯ ಸೆರೆ

ನವಲಗುಂದ : ಪಟ್ಟಣದ ಅಕ್ಕಿ ಓಣಿಯ ಜೋಡಿ ಆಂಜನೇಯ ದೇವಸ್ಥಾನ ಬಳಿಯ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ದಿನನಿತ್ಯ ಕಿರಿ ಕಿರಿ ಕೊಡುತ್ತಿದ್ದ ಕೋತಿಯನ್ನು ಗುರುವಾರ ಪುರಸಭೆ ವತಿಯಿಂದ ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು.

ಹೌದು ಸಾರ್ವಜನಿಕರ ಮೇಲೆ ದಾಳಿ ಮಾಡಿತ್ತಿದ್ದ, ಚಿಕ್ಕ ಮಕ್ಕಳ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತು ಕೊಂಡು, ಪ್ರತಿದಿನ ಸ್ಥಳೀಯರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದ. ಕೋತಿಯನ್ನು ಇಂದು ಸೆರೆ ಹಿಡಿಯಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಕೋತಿ ಹಲವರ ಮೇಲೆ ಮಾರಣಾಂತಿಕ ದಾಳಿ ಮಾಡಿದೆ ಎನ್ನಲಾಗುತ್ತಿದೆ.

ಇನ್ನು ಕೋತಿಯ ಸೆರೆಗೆ ಪುರಸಭೆ ಮುಖ್ಯಾಧಿಕಾರಿಗಳಾದ ವೀರಪ್ಪ ಹಸಬಿ ಅವರು ಬಾದಾಮಿಯಿಂದ ಸೆರೆ ಹಿಡಿಯುವವರನ್ನು ಕರೆಸಿದ್ದರು. ಇಂದು ಬೆಳಿಗ್ಗೆ ಆರು ಗಂಟೆಯಿಂದ ಕಾರ್ಯಾಚರಣೆ ನಡೆಸಿ, ಕೊನೆಗೆ ಕೋತಿ ಸೆರೆ ಸಿಕ್ಕಿದೆ.

Edited By : Shivu K
Kshetra Samachara

Kshetra Samachara

03/02/2022 05:29 pm

Cinque Terre

35.79 K

Cinque Terre

1

ಸಂಬಂಧಿತ ಸುದ್ದಿ