ಹುಬ್ಬಳ್ಳಿ: ವಾಣಿಜ್ಯನಗರಿ ಜನರಿಗೆ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಇವೆ. ಕೊರೋನಾ ಸಂಕಷ್ಟ ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಅಕಾಲಿಕ ಮಳೆಯ ಆತಂಕ.
ಹೌದು. ಧಾರವಾಡ ಜಿಲ್ಲೆಯಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ನಿನ್ನೆ ರಾತ್ರಿಯಿಂದಲೇ ಜಿಲ್ಲೆಯಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು, ಈಗಾಗಲೇ ಅಕಾಲಿಕ ಮಳೆಯಿಂದ ರೈತ ಬೆಳೆದ ಬೆಳೆ ಹಾಳಾಗಿದ್ದು, ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ.
ಇದೀಗ ಮತ್ತೆ ಮಳೆಯ ಆರಂಭಕ್ಕೆ ರೈತ ಸಮುದಾಯ ಕಂಗಾಲಾಗಿದ್ದು, ಹತ್ತಿ, ಮೆಕ್ಕೆಜೋಳ, ಕಡಲೆ, ಮೆಣಸಿನಕಾಯಿ ಬೆಳೆಗೆ ಮತ್ತೆ ಹೆಚ್ಚು ಹಾನಿಯಾಗುವ ಸಾಧ್ಯತೆಯಿದೆ. ಅಲ್ಲದೇ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇಂದು ಇಡೀ ದಿನ ಮಳೆ ಸಾಧ್ಯತೆ ಎಂದು ಮಾಹಿತಿ ಲಭ್ಯವಾಗಿದೆ.
Kshetra Samachara
02/12/2021 03:11 pm