ಧಾರವಾಡ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಅದರ ಮಾರುತಗಳು ಉತ್ತಮುಖ ಚಲನೆ ಹೊಂದಿದ್ದವು. ಹೀಗಾಗಿ ರಾತ್ರಿ ಹಾಗೂ ಇಂದು ಬೆಳಿಗ್ಗೆ ಮಳೆಯಾಗಿದೆ. ಆದರೆ, ನಾಳೆಯಿಂದ ಮಳೆಯ ಯಾವುದೇ ಲಕ್ಷಣವಿಲ್ಲ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ಮುಖ್ಯಸ್ಥ ಡಾ.ಆರ್.ಎಚ್.ಪಾಟೀಲ ತಿಳಿಸಿದ್ದಾರೆ.
ಇವತ್ತೂ ಒಂದು ದಿನ ಮೋಡ ಕವಿದ ವಾತಾವರಣ ಇರಲಿದೆ. ನಾಳೆಯಿಂದ ಮಳೆ ಇರುವುದಿಲ್ಲ. ಸದ್ಯ ಮಳೆಯ ಮಾರುತಗಳು ಮಹಾರಾಷ್ಟ್ರದತ್ತ ಚಲನೆ ಮಾಡಿವೆ. ಹೀಗಾಗಿ ಈ ಭಾಗದಲ್ಲಿ ಮಳೆ ಆಗೋದಿಲ್ಲ. ಡಿ.3ಕ್ಕೆ ಮತ್ತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರತ ಕುಸಿತ ಆಗಲಿದೆ. ಅದರಿಂದ ಚಂಡಮಾರುತ ಆಗುವ ಲಕ್ಷಣ ಇದೆ. ಅದು ಪಶ್ಚಿಮೋತ್ತರವಾಗಿ ಚಲಿಸಲಿದೆ. ಹೀಗಾಗಿ ಅದರ ಬಾಧೆ ಕರ್ನಾಟಕಕ್ಕೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Kshetra Samachara
02/12/2021 11:44 am