ಕುಂದಗೋಳ : ತಾಲೂಕಿನ ಹಳ್ಳಿಗಳಿಗೆ ಹಲವಾರು ದಿನಗಳಿಂದ ಈ ವರಾಹಗಳ ಕಾಟ ಅತಿಯಾಗಿದ್ದರೂ, ಇಂದಿಗೂ ಯಾವ ಅಧಿಕಾರಿಗಳಾಗಲಿ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಏನು ಕ್ರಮ ಕೈಗೊಂಡಿಲ್ಲ ನೋಡಿ. ಈ ಪರಿಣಾಮ ಹಳ್ಳಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಕೆಲ ದಿನಗಳ ಹಿಂದೆ ಗುಡೇನಕಟ್ಟಿ ಗ್ರಾಮದಲ್ಲಿ ತಂಡೋಪವಾಗಿದ್ದ ಹಂದಿಗಳ ಕಾಟಕ್ಕೆ ಮುಕ್ತಿ ಸಿಕ್ಕಿತು ಎನ್ನುವ ಮೊದಲೇ, ಶಾಸಕರ ಗ್ರಾಮ ಯರಗುಪ್ಪಿಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ.
ಗ್ರಾಮದ ಮಕ್ಕಳು ಹೊರಗಡೆ ಓಡಾಡೋ ಹಾಗಿಲ್ಲ, ಅಂಗಡಿಯಿಂದ ತಿಂಡಿ ತಿನಿಸು ತರೋ ಹಾಗಿಲ್ಲ ಈ ಹಂದಿಗಳು ಎಲ್ಲಿ ಬರ್ತವೋ ಎಂಬ ಭಯ ಎದುರಾಗಿದೆ, ಇನ್ನೂ ಗ್ರಾಮದಲ್ಲಿ ರೈತರು ಹೊಟ್ಟು ಮೇವು ಸಂಗ್ರಹದ ಬಣವೆ, ತಿಪ್ಪೆ, ಕೃಷಿ ಭೂಮಿ ಯಾವುದನ್ನು ಬಿಡದೆ ಹಂದಿಗಳು ಕೆದರುತ್ತಿದ್ದು ಸಾರ್ವಜನಿಕರಿಗೆ ನಿತ್ಯ ಹಂದಿ ಓಡಿಸುವುದೇ ಒಂದು ಕೆಲಸವಾಗಿದೆ.
ಗ್ರಾಮದ ಸಾರ್ವಜನಿಕು ಹೇಳೋ ಪೈಕಿ ಕಳೆದ ವರ್ಷ ಆರು ತಿಂಗಳುಗಳಿಂದ ಯಾರೋ ಗ್ರಾಮದಲ್ಲಿ ಹಂದಿ ಬಿಟ್ಟಿದ್ದು, ಅವು ದೊಡ್ಡವಾದ ಹಿಡಿದು ಮೌಂಸಕ್ಕೆ ಬಳುಸುತ್ತಿದ್ದಾರೆ ಎನ್ನುತ್ತಿದ್ದಾರೆ.
ಒಟ್ಟಾರೆ ತಾಲೂಕು ಆಡಳಿತ ಗಮನಿಸಿ ಹಂದಿಗಳ ಕಾಟಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಯರಗುಪ್ಪಿ ಜನ ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ಒತ್ತಾಯ ಮಾಡಿದ್ದಾರೆ.
Kshetra Samachara
29/11/2021 12:09 pm