ಧಾರವಾಡ: ಬೂಟಿನಲ್ಲಿ ನಾಗರಹಾವೊಂದು ಅವಿತು ಕುಳಿತಿದ್ದು, ಸ್ನೇಕ್ ತಿಪ್ಪಣ್ಣ ಅವರು ಅದನ್ನು ಹೊರತೆಗೆದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಧಾರವಾಡದ ಯಾಲಕ್ಕಿಶೆಟ್ಟರ ಕಾಲೊನಿಯ ಮನೆಯೊಂದರಲ್ಲಿ ಈ ಹಾವು ಕಾಣಿಸಿಕೊಂಡಿದೆ. ಬೂಟಿನಲ್ಲಿ ನಾಗರಹಾವು ಅವಿತು ಕುಳಿತಿದ್ದನ್ನು ಗಮನಿಸಿದ ಮನೆಯವರು ಕೂಡಲೇ ಸ್ನೇಕ್ ತಿಪ್ಪಣ್ಣ ಅವರಿಗೆ ಕರೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ತಿಪ್ಪಣ್ಣ ಹಾವನ್ನು ಹೊರತೆಗೆದು ಕಾಡಿಗೆ ಬಿಟ್ಟಿದ್ದಾರೆ. ಬೂಟುಗಳನ್ನು ಧರಿಸುವವರು ಒಂದು ಸಲ ಬೂಟಿನೊಳಗಡೆ ಏನಾದರೂ ಇದೆಯೇ ಎಂದು ಪರೀಕ್ಷಿಸಿ ಧರಿಸಬೇಕು.
Kshetra Samachara
22/11/2021 06:17 pm