ಹುಬ್ಬಳ್ಳಿ: ಅದು ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ. ಈ ಮಾರ್ಗವಾಗಿಯೇ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಆದರೆ ಈಗ ಆ ಮಾರ್ಗ ಸಂಪೂರ್ಣ ಬಂದ್ ಆಗಿದ್ದು, ಜನರು ಪರದಾಡುವಂತಾಗಿದೆ. ವರುಣನ ಆರ್ಭಟಕ್ಕೆ ಬೇಸತ್ತಿರುವ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆ ಹಿನ್ನಲೆಯಲ್ಲಿ ಇಂಗಳಹಳ್ಳಿ-ಕುಸಗಲ್ ಗ್ರಾಮಗಳ ಸಂರ್ಪಕ ಬಂದ್ ಆಗಿದ್ದು, ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಂರ್ಪಕ ಕಡಿತಗೊಂಡಿದೆ. ಇನ್ನೂ ಹಳ್ಳದ ನೀರಿನ ಹರಿವು ಹೆಚ್ಚಾದ ಹಿನ್ನಲೆ ರಸ್ತೆ ಮಾರ್ಗ ಬಂದ್ ಆಗಿದೆ. ಇದರಿಂದ ಜನರು ಓಡಾಡುವುದಾದರೂ ಹೇಗೆ ಎಂಬುವಂತ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.
ಇನ್ನೂ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು,ಇದರಿಂದ ಕೈಗ ಬಂದ ಫಸಲು ಹಾಳಾಗಿದೆ. ಹತ್ತಿ ಫಸಲನ್ನು ಬಿಡಿಸಬೇಕು ಎನ್ನುವಷ್ಟರಲ್ಲಿ ರೈತನ ಬದುಕಿಗೆ ಮಳೆರಾಯ ಬರೆ ಏಳೆದಿದ್ದಾನೆ. ಮುಂಗಾರು ಪ್ರವಾಹಕ್ಕೂ ತುತ್ತಾಗಿದ್ದ ಗ್ರಾಮಸ್ಥರು. ಸದ್ಯ ಅಕಾಲಿಕ ಮಳೆಯ ಹೊಡೆತಕ್ಕೂ ನಲುಗಿದ್ದಾನೆ.
ಒಟ್ಟಿನಲ್ಲಿ ವರುಣನ ಆರ್ಭಟ ಮೀತಿ ಮೀರಿದ್ದು, ಈಗ ಗ್ರಾಮಗಳ ಸಂಪರ್ಕವನ್ನು ಕಳೆದುಕೊಂಡಿರುವ ಗ್ರಾಮಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಯ್ಯೋ ಮಳೆರಾಯ ಸಾಕು ಮಾಡು ನಿನ್ನ ಆರ್ಭಟ.
Kshetra Samachara
20/11/2021 06:27 pm