ಧಾರವಾಡ: ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಎಚ್.ಪಾಟೀಲ ತಿಳಿಸಿದ್ದಾರೆ.
ವಾಯುಭಾರ ಕುಸಿತದ ಪರಿಣಾಮ ದಕ್ಷಿಣದಿಂದ ಈಗ ಉತ್ತರಕ್ಕೆ ಬಂದಿದೆ. ರಾಜ್ಯದ ದಕ್ಷಿಣ ಭಾಗದಂತೆ ಈಗ ಉತ್ತರ ಭಾಗದಲ್ಲೂ ಮಳೆಯಾಗಲಿದೆ. ನ.19 ಹಾಗೂ 20 ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಎರಡೂ ಕಡೆಗಳಲ್ಲಿ ಮಳೆಯಾಗಲಿದೆ ಎಂದಿದ್ದಾರೆ.
ಈ ಮಳೆಯ ಪರಿಣಾಮ ಹಿಂಗಾರು ಬೆಳೆಗೆ ಹಾನಿಯುಂಟಾಗಲಿದೆ. ಹಿಂಗಾರು ಬೆಳೆಗಳಲ್ಲಿ ರೈತರು ನೀರು ನಿಲ್ಲದಂತೆ ಮಾಡಬೇಕು. ಗದ್ದೆಗಳಲ್ಲಿ ರೈತರು ಬಸಿಗಾಲುವೆ ಮಾಡಬೇಕು. ಈ ಮೋಡ ಕವಿದ ವಾತಾವರಣ ನ.24ರವರೆಗೂ ಇರಲಿದೆ. ಇದನ್ನು ನೋಡಿಕೊಂಡು ಕೃಷಿ ಚಟುವಟಿಕೆ ಮಾಡಬೇಕು ಎಂದಿದ್ದಾರೆ.
Kshetra Samachara
18/11/2021 09:44 pm