ಹುಬ್ಬಳ್ಳಿ: ಗಣೇಶ ಪಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ಕಾರಿನ ಇಂಜಿನ್ ನಲ್ಲಿ ಅವಿತು ಕುಳಿತ ನಾಗರಹಾವನ್ನು ಉರಗ ರಕ್ಷಕ ಸ್ನೇಕ್ ಸಂಗಮೇಶ್ ಅವರು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಹೌದು..ಅಪಾರ್ಟ್ಮೆಂಟ್ ನಲ್ಲಿ ನಿಲ್ಲಿಸಿದ್ದ ಕಾರಿನ ಇಂಜಿನನಲ್ಲಿ ಸೇರಿಕೊಂಡಿದ್ದ ಹಾವು ಮನೆಯವರಿಗೆ ಆತಂಕವನ್ನು ಹುಟ್ಟಿಸಿತ್ತು. ಆಗ ಮನೆಯವರು ಸ್ನೇಕ್ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಆಗಮಿಸಿದ ಸಂಗಮೇಶ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
Kshetra Samachara
13/11/2021 08:50 am