ಕುಂದಗೋಳ : ರೈತರ ಮೇಲೆ ಈ ಮಳೆದೇವನಿಗೆ ಅದೇನು ? ಮುನಿಸು ತಿಳಿಯದು ನೋಡಿ, ಮುಂಗಾರು ಹಿಂಗಾರು ಬಿತ್ತನೆಯ ಅವಧಿಗೆ ಸಕಾಲಕ್ಕೆ ಕೃಪೆ ತೋರದೆ ರೈತರನ್ನು ಪೇಚಿಗೆ ಸಿಲುಕುವಂತೆ ಮಾಡಿ ಬಿಡುತ್ತಾನೆ.
ಹೌದು ! ಈಗ ಇಂತಹುದೇ ಪೇಚಿಗೆ ಕುಂದಗೋಳ ತಾಲೂಕಿನ ರೈತರು ಸಿಲುಕಿ ಹಿಂಗಾರು ಬಿತ್ತನೆಗೆ ಭೂಮಿಯಲ್ಲಿ ಸಮರ್ಪಕ ತೇವಾಂಶ ಇಲ್ಲವಾದ್ರೂ, ಈ ಚಿತ್ತಿ ಮಳೆ ಚಿತ್ತ ಬದಲಾಯಿಸಿ ಸುರಿಯಬಹುದು ಎಂಬ ನಿರೀಕ್ಷೆ ಮೇಲೆ ಭೂತಾಯಿ ಒಡಲಿಗೆ ಬಿತ್ತನೆ ಮೂಲಕ ಕಡಲೆ, ಗೋಧಿ, ಕುಸುಬೆ ಬೀಜಗಳನ್ನು ಹಾಕಿ ಆಕಾಶದ ಕಡೆಗೆ ನೋಡುತ್ತಲಿದ್ದಾರೆ.
ಈಗಾಗಲೇ ಮುಂಗಾರು ಬೆಳೆಯನ್ನು ಅಚ್ಚುಕಟ್ಟಾಗಿ ಪಡೆದ ರೈತರಿಗೆ ಹಿಂಗಾರು ಬಿತ್ತನೆ ಜೊತೆಗೆ ಇಬ್ಬನಿ ಹೊಡೆತದ ಬಿರು ಬಿಸಿಲಿಗೆ ಸಿಲುಕಿ ಹತ್ತಿ ಬೆಳೆತ ಹೂ ಮೋಪು ಕಾಯಿ ಒಣಗುತ್ತಿದ್ದು ಮೆಣಸಿನ ಗಿಡಗಳು ಸಹ ಇದೇ ಹೊಯ್ದಾಟದಲ್ಲಿ ವರುಣನ ಕೃಪೆಗೆ ಕಾಯುತ್ತಿವೆ.
ರೈತರು ಮಳೆದೇವ ಹಾಗೂ ಮನೆದೇವರ ಮೇಲೆ ವಿಶ್ವಾಸವಿಟ್ಟು, ಮಳೆ ಆಗುತ್ತೇ ಎಂಬ ಭರವಸೆ ಮೇಲೆ ಬಿತ್ತನೆ ಕಾರ್ಯ ಆರಂಭಿಸಿ ಚಿತ್ತಿ ಸ್ವಾತಿ ದಾರಿ ಕಾಯುತ್ತಿದ್ದಾರೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
21/10/2021 12:49 pm