ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ಧಾರಾಕಾರ ಮಳೆ, ಅಂಗಡಿ- ಮುಗಟ್ಟುಗಳಲ್ಲಿ ನುಗ್ಗಿದ ಕೊಳಚೆ ನೀರು

ಅಣ್ಣಿಗೇರಿ : ಪಟ್ಟಣದಲ್ಲಿ ಸೋಮವಾರ ಸಂಜೆ ನಿರಂತರವಾಗಿ ಧಾರಕಾರ ಮಳೆ ಸುರಿದಿದೆ. ಮಳೆಯ ರಭಸಕ್ಕೆ ಪಟ್ಟಣದ ಕೆಲ ಅಂಗಡಿ ಮುಂಗಟ್ಟುಗಳಿಗೆ ಕೊಳಚೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದೆ. ಪುರಸಭೆ ಹತ್ತಿರದ ವಾಣಿಜ್ಯ ಮಳೆಗೆಯ ಕೆಳ ಭಾಗದಲ್ಲಿರುವ 8 ಅಂಗಡಿಗಳಿಗೆ ಮಳೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ಹಾಳಾಗಿವೆ. ಅಂಗಡಿಗಳಲಿದ್ದ ಕಂಪ್ಯೂಟರ್ , ಕಾಗದ ಪತ್ರಗಳು ಸೇರಿದಂತೆ ಅನೇಕ ವಸ್ತುಗಳು ಮಳೆಯ ರಭಸಕ್ಕೆ ತುತ್ತಾಗಿವೆ. ಇದೇ ವಾಣಿಜ್ಯ ಮಳಿಗೆಯಲ್ಲಿದ್ದ ಪಡಿತರ ವಿತರಣಾ ಕೇಂದ್ರದಲ್ಲಿ ಸಂಗ್ರಹವಿದ್ದ 2 ಲಾರಿ ಅಕ್ಕಿ ಚೀಲಗಳು ಕೂಡಾ ಮಳೆಯ ನೀರಿನಲ್ಲಿ ನಷ್ಟವಾಗಿದೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೆ ನಾವು ಜಿಲ್ಲಾಧಿಕಾರಿಗಳ ಸಭೆಯಲ್ಲಿ ದ್ದೇವೆ ಎಂದು ಹೇಳುತ್ತಾರೆ. ಪಟ್ಟಣದಲ್ಲಿರುವ ಬಹುತೇಕ ರಸ್ತೆಗಳು ಮಳೆಯ ರಭಸಕ್ಕೆ ಸಿಲುಕಿ ಹಾಳಾಗಿ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿವೆ .ಇನ್ನು ಮುಂದಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಸಜ್ಜಿತವಾದ ರಸ್ತೆ, ಗಟಾರ ನಿರ್ಮಾಣ ಮಾಡಿ ಮಳೆಯ ನೀರು ಪಟ್ಟಣದ ಹೊರ ಹೋಗುವಂತೆ ಮಾಡಬೇಕೆಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮೂಲಕ ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/10/2021 10:30 pm

Cinque Terre

63.96 K

Cinque Terre

3

ಸಂಬಂಧಿತ ಸುದ್ದಿ