ಅಳ್ನಾವರ: ತಾಲೂಕಿನಾದ್ಯಂತ ನಿನ್ನೆ ಸುರಿದ ವಿಪರೀತ ಮಳೆ, ಗಾಳಿಗೆ ರೈತರ ಬದುಕು ಬೀದಿಗೆ ಬರುವಂತಾ ಪರಿಸ್ಥಿತಿ ಎದುರಾಗಿದೆ.ಕಟಾವಿಗೆ ಬಂದ ಕಬ್ಬು ಗಾಳಿ ಮಳೆಗೆ ಸಿಕ್ಕಿ ನೆಲ ಕಚ್ಚಿದೆ.
ಮಾರ್ಚ್-ಏಪ್ರಿಲ್ ನಲ್ಲಿ ಸುರಿದ ಅಕಾಲಿಕ ಮಳೆಗೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು.ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುವ ರಭಸಕ್ಕೆ ಬೆಳೆ ಕೊಡುವ ಫಲವತ್ತಾದ ಭೂಮಿಯ ಮಣ್ಣು ಸವಕಳಿಗೆ ಸಿಲುಕಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು.ಇನ್ನೇನು ಸುಧಾರಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಮತ್ತೆ ಅಳ್ನಾವರ ತಾಲೂಕಿಗೆ ಮಳೆರಾಯನ ಆರ್ಭಟ ಶುರುವಾಗಿದೆ.ಸಣ್ಣ ಪ್ರಮಾಣದಲ್ಲಿ ಮಳೆ ಬಂದಲ್ಲಿ ತೊಂದರೆ ಆಗುವುದಿಲ್ಲ,ಆದರೆ ಮೊನ್ನೆ ಇಂದ ವಿಪರೀತ ಗಾಳಿ ಬೀಸುತ್ತಿದೆ,ಜೊತೆಗೆ ಮಳೆ ಬೇರೆ.ಪ್ರಕೃತಿಯ ಈ ಕಣ್ಣಾ ಮುಚ್ಚಾಲೆ ಆಟಕ್ಕೆ ರೈತರ ಬದುಕು ಬೀದಿಗೆ ಬರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಕಟಾವಿಗೆ ಬಂದ ಕಬ್ಬು ನೆಲ ಕಚ್ಚಿದೆ.ಇನ್ನೇನು ಕೆಲವೇ ದಿನಗಳಲ್ಲಿ ಕಬ್ಬಿನ ಫ್ಯಾಕ್ಟರಿ ಪ್ರಾರಂಭ ವಾಗುತ್ತವೆ. ಹೀಗೆ ಮಳೆ ಗಾಳಿ ಮುಂದುವರೆದರೆ ಕಬ್ಬು ಕಟಾವು ಮಾಡಲಿಕ್ಕೆ ಸಾಧ್ಯವಿಲ್ಲ.ಕಟಾವು ಮಾಡಿದ ಕಬ್ಬನ್ನು ಫ್ಯಾಕ್ಟರಿಗಳಿಗೆ ರವಾನಿಸುವುದು ಕಷ್ಟ ಸಾಧ್ಯ.
ಇಲ್ಲಿನ ರೈತರ ಮೂಲ ಆದಾಯವೇ ಕಬ್ಬು.ಗೋವಿನ ಜೋಳ,ಬತ್ತ ಅಷ್ಟಕ್ಕಷ್ಟೇ.ಹತ್ತಿ ಅಂತು ಇಲ್ಲವೇ ಇಲ್ಲ. ವರ್ಷಾನುಗಟ್ಟಲೆ ದುಡಿದು,ಬೀಜ,ಗೊಬ್ಬರ ಆಳು ಹೀಗೆ ಭೂಮಿ ಉದ್ದಕ್ಕೂ ವರ್ಷಾನುಗಟ್ಟಲೆ ಹಣ ಶ್ರಮ ಎರಡು ಹಾಕಿ ಬೆಳೆದ ಪೈರು ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ ಮಳೆರಾಯನ ಆರ್ಭಟಕ್ಕೆ,ಪ್ರಕೃತಿಯ ಆಟಕ್ಕೆ ರೈತರ ಬದುಕು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ.ಹೀಗೆ ಮುಂದುವರೆದರೆ ರೈತರು ಸಾಲಕ್ಕೆ ಸಾವಿಗೆ ಶರಣಾಗಬೇಕಾಗುವುದು ಖಂಡಿತ.
-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ಅಳ್ನಾವರ.
Kshetra Samachara
05/10/2021 11:55 am