ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕವಲಗೇರಿ, ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದು ಬೇರೆ ಬೇರೆ ಚಿರತೆ ಅಲ್ಲ

ಧಾರವಾಡ: ಹುಬ್ಬಳ್ಳಿ ನೃಪತುಂಗಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮತ್ತು ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಸೆರೆ ಹಿಡಿಯಲಾಗಿದ್ದ ಚಿರತೆ ಒಂದೇ ಆಗಿದೆ ಎಂಬುದು ಡಿಎನ್ಎ ವರದಿಯಿಂದ ದೃಢಪಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಚಿರತೆ ಆರಂಭದಲ್ಲಿ ಹುಬ್ಬಳ್ಳಿ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೇ ಕಟ್ಟಡದಲ್ಲಿ ವಾಸವಾಗಿತ್ತು. ನಂತರ ಅದು ಬಹುಶಃ ಅಮರಗೋಳ, ಗೋವನಕೊಪ್ಪ ಮಾರ್ಗವಾಗಿ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಗಳಿಗೆ ಹೊಗಿರುವ ಕುರಿತು ಅಭಿಪ್ರಾಯಪಡಲಾಗಿತ್ತು.

ಅದರಂತೆ ಎರಡು ಕಡೆ ಕಂಡು ಬಂದ ಚಿರತೆ ಒಂದೇ ಅಥವಾ ಬೇರೆ ಬೇರೆಯಾ ಎಂಬುದನ್ನು‌ ಖಾತ್ರಿಪಡಿಸಿಕೊಳ್ಳಲು ಎರಡು ಕಡೆಯಲ್ಲಿ ಸಂಗ್ರಹಿಸಲಾಗಿದ್ದ ಚಿರತೆ ಲದ್ದಿಯನ್ನು ಡಿಎನ್ಎ ಪರೀಕ್ಷೆಗಾಗಿ ಹೈದರಾಬಾದ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅದರ ವರದಿ ಇಂದು ಅರಣ್ಯ ಇಲಾಖೆಗೆ ತಲುಪಿದ್ದು, ಎರಡು ಕಡೆ ಕಂಡು ಬಂದಿದ್ದ ಚಿರತೆ ಒಂದೇ ಆಗಿದೆ ಎಂದು ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/10/2021 07:57 pm

Cinque Terre

11.13 K

Cinque Terre

0

ಸಂಬಂಧಿತ ಸುದ್ದಿ