ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬೋನಿಗೆ ಬಿದ್ದ ಮೇಲೆ ಆರ್ಭಟಿಸಿದ ಚಿರತೆ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಶಿವಪ್ಪ ಉಪ್ಪಾರ ಎಂಬುವವರ ಕಬ್ಬಿನ ಗದ್ದೆಯಲ್ಲಿದ್ದ ಚಿರತೆ ಇದೀಗ ಬೋನಿಗೆ ಬಿದ್ದಿದ್ದು, ಬೋನಿಗೆ ಬಿದ್ದ ನಂತರ ಅದರ ಆರ್ಭಟ ಜೋರಾಗಿತ್ತು.

ಕಳೆದ ಕೆಲವು ದಿನಗಳಿಂದ ಕಬ್ಬಿನ ಗದ್ದೆಯಲ್ಲಿ ಕಣ್ಣಾಮುಚ್ಚಾಲೆ ಆಟ ನಡೆಸಿದ್ದ ಚಿರತೆಯ ಸೆರೆಗಾಗಿ ಬೋನು ಸಿದ್ಧಪಡಿಸಿ ಇಡಲಾಗಿತ್ತು. ಇಂದು ಬೆಳಗಿನಜಾವ ಅದು ತಾನಾಗಿಯೇ ಬೋನಿಗೆ ಬಿದ್ದಿದ್ದು, ಬೋನಿಗೆ ಬಿದ್ದ ನಂತರ ಘರ್ಜಿಸತೊಡಗಿತ್ತು.

ವೀಡಿಯೋ ಮಾಡಲು ಹೋದವರನ್ನು ನೋಡಿ ಬೋನಿನಿಂದಲೇ ಘರ್ಜಿಸುತ್ತಿತ್ತು. ನಂತರ ಭದ್ರತೆ ಮಧ್ಯೆ ಚಿರತೆಯನ್ನು ಅರಣ್ಯ ಇಲಾಖೆಯವರು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.

Edited By : Shivu K
Kshetra Samachara

Kshetra Samachara

26/09/2021 12:10 pm

Cinque Terre

94.15 K

Cinque Terre

14

ಸಂಬಂಧಿತ ಸುದ್ದಿ