ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚಿರತೆಗಾಗಿ ಮುಂದುವರೆದ ಶೋಧ ಕಾರ್ಯ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿರುವ ಚಿರತೆಯ ಶೋಧಕ್ಕಾಗಿ ಕಾರ್ಯಾಚರಣೆ ನಡೆಯುತ್ತಲೇ ಇದ್ದು, ಇದುವರೆಗೂ ಚಿರತೆ ಮಾತ್ರ ಪತ್ತೆಯಾಗಿಲ್ಲ.

ಶುಕ್ರವಾರ ಕೂಡ ಅರಣ್ಯ ಇಲಾಖೆ ಸಿಬ್ಬಂದಿ ಕವಲಗೇರಿ ಹಾಗೂ ಗೋವನಕೊಪ್ಪದಲ್ಲಿ ಡ್ರೋಣ್ ಕ್ಯಾಮೆರಾ ಮೂಲಕ ಚಿರತೆ ಪತ್ತೆಗಾಗಿ ಶೋಧ ನಡೆಸಿದರು. ಆದರೆ, ಡ್ರೋಣ್ ಕ್ಯಾಮೆರಾ ಕಣ್ಣಿಗೂ ಚಿರತೆ ಪತ್ತೆಯಾಗಿಲ್ಲ.

ನಿನ್ನೆ ಚಿರತೆಯ ಹೆಜ್ಜೆ ಗುರುತು ಹಾಗೂ ಲದ್ದಿ ಕೂಡ ಲಭ್ಯವಾಗಿದೆ. ತಡರಾತ್ರಿ ಅರಣ್ಯ ಇಲಾಖೆಯವರ ಕಣ್ತಪ್ಪಿಸಿ ಓಡಾಡಿದ ಘಟನೆ ಕೂಡ ನಡೆದಿದೆ. ಇಂದು ಬೆಳಿಗ್ಗೆ ಗೋವನಕೊಪ್ಪದ ಸುತ್ತಮುತ್ತ ಕಂಡು ಬಂದ ಚಿರತೆ ಮರಳಿ ಕವಲಗೇರಿಯ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದೆ. ಈಗಲೂ ಅರಣ್ಯ ಇಲಾಖೆಯವರಿಂದ ಶೋಧ ಕಾರ್ಯ ನಡೆದಿದೆ.

Edited By : Manjunath H D
Kshetra Samachara

Kshetra Samachara

24/09/2021 03:55 pm

Cinque Terre

62.55 K

Cinque Terre

4

ಸಂಬಂಧಿತ ಸುದ್ದಿ