ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಚಿರತೆ ಲದ್ದಿ ತಪಾಸಣೆಗಾಗಿ ಹೈದರಾಬಾದ್‌ಗೆ ರವಾನೆ

ಧಾರವಾಡ: ಹುಬ್ಬಳ್ಳಿಯ ನೃಪತುಂಗ ಬೆಟ್ಟ ಹಾಗೂ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಂಡು ಬಂದಿದೆ ಎನ್ನಲಾದ ಎರಡೂ ಚಿರತೆಗಳ ಲದ್ದಿ ಅರಣ್ಯ ಇಲಾಖೆ ಸಿಬ್ಬಂದಿಗೆ ಲಭ್ಯವಾಗಿದ್ದು, ಆ ಲದ್ದಿ ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎನ್ನುವ ಬಗ್ಗೆ ತಪಾಸಣೆ ನಡೆಸುವುದಕ್ಕೋಸ್ಕರ ಅದನ್ನು ಹೈದರಾಬಾದ್ ಲ್ಯಾಬರೋಟರಿಗೆ ಕಳುಹಿಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.

ಈ ಸಂಬಂಧ ದೂರವಾಣಿ ಮುಖಾಂತರ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿರುವ ಅವರು, ಹುಬ್ಬಳ್ಳಿಯಲ್ಲಿ ನಿನ್ನೆ ಚಿರತೆಯ ಲದ್ದಿ ಲಭ್ಯವಾಗಿದೆ. ಇಂದು ಕವಲಗೇರಿಯ ಕಬ್ಬಿನ ಗದ್ದೆಯಲ್ಲೂ ಚಿರತೆ ಲದ್ದಿ ಲಭ್ಯವಾಗಿದ್ದು, ಇದೂ ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎಂಬುದರ ಬಗ್ಗೆ ನಾವು ಖಾತ್ರಿಪಡಿಸಿಕೊಳ್ಳಬೇಕಿದೆ. ಆದರೂ ಹುಬ್ಬಳ್ಳಿಯಲ್ಲಿ ಒಂದು ಹಾಗೂ ಕವಲಗೇರಿಯಲ್ಲಿ ಒಂದು ತಂಡ ಚಿರತೆ ಸಿಗುವವರೆಗೂ ನಿರಂತರವಾಗಿ ಕಾರ್ಯಾಚರಣೆ ನಡೆಸಲಿವೆ ಎಂದು ಯಶಪಾಲ್ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

23/09/2021 05:44 pm

Cinque Terre

77.38 K

Cinque Terre

14

ಸಂಬಂಧಿತ ಸುದ್ದಿ