ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ನೃಪತುಂಗ ಬೆಟ್ಟ ಹಾಗೂ ರಾಜನಗರದ ಕೇಂದ್ರಿಯ ವಿದ್ಯಾಲಯದ ಬಳಿ ಪ್ರತ್ಯಕ್ಷವಾಗಿದ್ದ ಚಿರತೆಯು ತಡರಾತ್ರಿ ವೇಳೆ ಮತ್ತೆ ಪ್ರತ್ಯಕ್ಷವಾಗುವ ಮೂಲಕ ಸುತ್ತಮುತ್ತಲಿನ ಜನರಲ್ಲಿ ಆತಂಕ ಹುಟ್ಟು ಹಾಕಿದೆ. ಜನನಿಬೀಡ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಸಹ ಚಿರತೆಗಾಗಿ ತೀವ್ರ ಶೋಧ ಕಾರ್ಯ ನಡೆಸಿಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ನೃಪತುಂಗ ಬೆಟ್ಟಣ ರಾಜನಗರ, ಶಿಡಿನಗರ, ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸುತ್ತಿದೆ. ಇದರ ಮಧ್ಯೆ ತಡರಾತ್ರಿ ಹಂದಿ ಮರಿಯೊಂದನ್ನು ಚಿರತೆ ಹೊತ್ತೊಯ್ದದೆ ಎಂದು ಸ್ಥಳೀಯರು ಹೇಳುತ್ತಿರುವದರಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ. ಹೀಗಾಗಿ ಅಶೋಕ ನಗರ ಠಾಣಾ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರು ಮನೆ ಬಿಟ್ಟು ಹೊರಗಡೆ ತಿರುಗಾಡದಂತೆ ಮನವಿ ಮಾಡುತ್ತಿದ್ದಾರೆ. ಅದರಲ್ಲೂ ರಾತ್ರಿ ವೇಳೆ ಯಾರು ಮನೆಯಿಂದ ಹೊರಬೇಡಿ ಎಂದು ಡಿಸಿಪಿ ರಾಮರಾಜನ್ ಮನವಿ ಮಾಡಿದ್ದಾರೆ.
Kshetra Samachara
21/09/2021 03:46 pm