ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಅದೊಂದು ಪ್ರಾಣಿ ಆತಂಕ ಸೃಷ್ಟಿಸಿದೆ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಜನರನ್ನು ಆತಂಕದಿಂದಲೇ ಓಡಾಡುವಂತೆ ಮಾಡಿದೆ. ಕೆಲವು ದಿನಗಳಿಂದ ಆ ಪ್ರಾಣಿ ಇಲ್ಲೇ ಓಡಾಡುತ್ತಿದೆ ಎನ್ನುವ ಊಹಾಪೋಹಕ್ಕೆ ಇದೀಗ ಪುಷ್ಟಿ ಸಿಕ್ಕಿದ್ದು ಜನರು ಜೀವವನ್ನೇ ಕೈಯಲ್ಲಿ ಹಿಡಿದುಕೊಂಡೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ
ಹೀಗೆ ಏರಿಯಾ ತುಂಬೆಲ್ಲ ಎಚ್ಚರಿಕೆ ಫಲಕಗಳು. ಚಿರತೆ ಇದೆ ಓಡಾಡುವವಾಗ ಹುಷಾರ್ ಎನ್ನುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ. ಹೌದು ಇದೆಲ್ಲೋ ಮಲೆನಾಡ ಪ್ರದೇಶದಲ್ಲಿ ಹಾಕಲಾಗಿರುವ ಎಚ್ಚರಿಕೆ ಫಲಕಗಳಲ್ಲ, ಬದಲಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯ ರಾಜ್ ನಗರದಲ್ಲಿ ಹಾಕಿರುವ ಫಲಕಗಳು. ಕಳೆದ 4-5 ದಿನಗಳಿಂದ ಇಲ್ಲಿ ಚಿರತೆ ಇದೆ. ರಾತ್ರಿಯೆಲ್ಲ ಓಡಾಟ ಮಾಡುತ್ತೆ ಅಂತ ಸ್ಥಳೀಯರು ಹೇಳಿದ್ದರು. ಅದರಂತೆ ಕೆಲ ದಿನಗಳ ಅರಣ್ಯ ಸಿಬ್ಬಂದಿ ನೃಪತುಂಗ ಬೆಟ್ಟದ ಸುತ್ತಮುತ್ತ ಚಿರತೆಗಾಗಿ ಬಲೆ ಬಿಸಿದರು. ಆದರೆ ಚಿರತೆ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಮೊನ್ನೆ ರಾತ್ರಿ ದಿಢೀರ್ ಅಂತ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕೆಲವು ದಿನಗಳ ಹಿಂದೆಯೇ ಇಲ್ಲಿ ಚಿರತೆ ಇದೆ ಅನ್ನೋ ಊಹೆ ಮಾತ್ರ ಇತ್ತು. ಆದ್ರೀಗ ಚಿರತೆ ಇರೋದು ಪಕ್ಕಾ ಆದಮೇಲೆ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯ ಅಶೋಕ ನಗರದ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಚಿರತೆಯಿಂದ ಯಾರಿಗೂ ತೊಂದರೆ ಆಗಬಾರದು ಅನ್ನುವ ಕಾರಣಕ್ಕೆ 4 ಬೋನ್ ಗಳನ್ನು ಇಟ್ಟಿದ್ದು, ಮೊನ್ನೆ ರಾತ್ರಿ ಕಾಣಿಸಿಕೊಂಡಿದ್ದ ಕೇಂದ್ರೀಯ ವಿದ್ಯಾಲಯದ ಮೈದಾನದ ತುಂಬೆಲ್ಲ ಚಿರತೆ ಓಡಾಟ ಮಾಡಿದ್ದು, ರಾತ್ರಿಯ ವೇಳೆಯಲ್ಲಿ ಮಾತ್ರ ಚಿರತೆ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಅರಣ್ಯ ಸಿಬ್ಬಂದಿಯ ಮಾಹಿತಿ ಪ್ರಕಾರ ಅದಕ್ಕೆ ಆಹಾರದ ಕೊರತೆ ಇಲ್ಲವಂತೆ. ರಾತ್ರಿ ಮಾತ್ರ ಭೇಟೆಯಾಡಿ ಮತ್ತೆ ಅವಿತಿಕೊಳ್ಳುವುದರಿಂದ ಚಿರತೆ ಸೆರೆಹಿಡಿಯುವುದು ಕೊಂಚ ಕಷ್ಟವಾಗಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನ ಧಾರವಾಡದಿಂದ ನೇಮಿಸಲಾಗುತ್ತಿದ್ದು, ಅತಿಶೀಘ್ರದಲ್ಲಿ ಚಿರತೆ ಸೆರೆಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಒಟ್ಟಾರೆ ಸ್ಥಳೀಯ ಜನರ ನಿದ್ದೆಗೇಡಿಸಿರುವ ಈ ಚಿರತೆಯಿಂದ ಜನರು ಹೊರಬರಲು ಸಹ ಭಯ ಪಡುವಂತಾಗಿದೆ..ಪುಟ್ಟ ಪುಟ್ಟ ಮಕ್ಕಳು ಇರುವ ನಗರವಾಗಿದ್ದು ಆದಷ್ಟು ಬೇಗ ಚಿರತೆ ಸೆರೆಹಿಡಿಡ್ರೆ ಸಾಕು ಅಂತ ಜನ ಕಾಯುತ್ತಿದ್ದಾರೆ.
Kshetra Samachara
20/09/2021 12:39 pm