ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಮಳೆಯ ಆರ್ಭಟಕ್ಕೆ ಸರ್ಕಾರಿ ಆಸ್ಪತ್ರೆಯ ಕಟ್ಟಡ ಕುಸಿತ

ವರದಿ: ಮಹಾಂತೇಶ ಪಠಾಣಿ

ಅಳ್ನಾವರ: ಅಳ್ನಾವರ ತಾಲೂಕಿನಾಧ್ಯಂತ ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದ ಸಾಕಷ್ಟು ಪ್ರಮಾಣದ ಹಾನಿ ಸಂಭವಿಸಿದೆ.

ಮಳೆಯ ಅವಾಂತರಕ್ಕೆ ಅಳ್ನಾವರ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯ ದಾಖಲೆಯ ಕೊಠಡಿ ಕುಸಿದು ಟ್ರೆಝರಿ,ರ್ಯಾಕ್,ಟೇಬಲ್ ಗಳ ಜೊತೆಗೆ ಕೆಲವೊಂದು ದಾಖಲೆಗಳು ಹಾಳಾಗಿವೆ.

ಆಸ್ಪತ್ರೆಯ ಪಕ್ಕದಲ್ಲಿ ಹೊಸ ಕಟ್ಟಡದ ಕಾರ್ಯ ಪ್ರಗತಿಯಲ್ಲಿದ್ದು ಅದು ಪೂರ್ಣ ಗೊಳ್ಳುವವರೆಗೂ ಆಸ್ಪತ್ರೆಗೆ ದಾಖಲಾಗುವವರಿಗೆ ತೊಂದರೆ ತಪ್ಪಿದ್ದಲ್ಲ.

ಗೋಡೆ ಕುಸಿತದ ಸಂದರ್ಭದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ,ಯಾರಿಗೂ ಯಾವುದೇ ಹಾನಿ ಉಂಟಾಗಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/07/2021 03:58 pm

Cinque Terre

54.38 K

Cinque Terre

0

ಸಂಬಂಧಿತ ಸುದ್ದಿ