ಧಾರವಾಡ: ಅಳ್ನಾವರದ ಹಿರೇಕೆರೆಯಲ್ಲಿ ಬುಧವಾರ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಕೆರೆಯು ಪಟ್ಟಣಕ್ಕೆ ಹತ್ತಿಕೊಂಡೇ ಇದ್ದು, ಇಲ್ಲಿ ಪ್ರತಿದಿನ ಜಾನುವಾರಗಳು ಮೇಯಲು ಹೋಗುತ್ತವೆ. ಕಳೆದ ಕೆಲ ತಿಂಗಳುಗಳ ಹಿಂದಷ್ಟೆ ಮೊಸಳೆ ಇರುವುದರ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು. ಆದರೆ, ಮೊಸಳೆ ಹಿಡಿಯುವ ಯಾವುದೇ ಕೆಲಸವಾಗಿರಲಿಲ್ಲ. ಈಗ ಕೆರೆಯಲ್ಲಿ ಮತ್ತೊಮ್ಮೆ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈಗಲಾದ್ರೂ ಸಹ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಅಲ್ಲಿನ ಜನ ಒತ್ತಾಯಿಸುತ್ತಿದ್ದಾರೆ.
Kshetra Samachara
25/02/2021 11:46 am