ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ನಿವಾಸದಲ್ಲಿ ಕಳೆದ ಮೂರು ದಿನಗಳಿಂದ ಹಾವೊಂದು ಕಾಣಿಸಿಕೊಂಡಿದ್ದು,ಹು-ಧಾ ಪೊಲೀಸ್ ಕಮೀಷನರೇಟ್ ನ ಸಿಬ್ಬಂದಿಗಳು ಆತಂಕಗೊಂಡಿದ್ದರು.
ಹೌದು.. ಕಮೀಷನರ್ ನಿವಾಸ ಸುತ್ತಮುತ್ತ ಪ್ರತ್ಯಕ್ಷವಾಗುತಿದ್ದ ಹಾವು ಪೊಲೀಸರಲ್ಲಿಯೇ ಭಯವನ್ನು ಹುಟ್ಟು ಹಾಕಿತ್ತು. ಹಾವು ಹಿಡಿಯಲು ಕಮೀಷನರೇಟ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು.ಕೊನೆಗೆ ಇಂದು ಸ್ನೇಕ್ ನಾಗರಾಜ ಅಲಿಯಾಸ್ ನಿಂಗಪ್ಪ ಅಪ್ಪಣ್ಷನರ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ಪಣ್ಣ 15 ನಿಮಿಷಗಳಲ್ಲಿ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದು, ಸ್ನೇಕ್ ನಾಗರಾಜ ಅಲಿಯಾಸ್ ನಿಂಗಪ್ಪ ಅಪ್ಪಣ್ಣವರ ಜೊತೆಗೆ ಕಮೀಷನರ್ ಲಾಬುರಾಮ್ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Kshetra Samachara
19/02/2021 10:41 am