ಧಾರವಾಡ: ನಿನ್ನೆ ಸಂಜೆಯಿಂದ ರಾತ್ರಿವರೆಗೆ ಸುರಿದ ಅಕಾಲಿಕ ಮಳೆ ರೈತರಿಗೆ ಹಾಗೂ ಜನಜೀವನಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಈ ಅಡ್ಡ ಮಳೆಗೆ ಧಾರವಾಡ ತಾಲೂಕಿನ ಹಲವು ಹಳ್ಳಿಗಳಲ್ಲಿ ಮನೆಗಳು ಕುಸಿದು ಬಿದ್ದಿವೆ.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಸುಮಾರು ಮೂರ್ನಾಲ್ಕು ಮನೆಗಳು ಪ್ರತಿಶತ 70 ರಷ್ಟು ಕುಸಿದುಬಿದ್ದಿವೆ. ಗ್ರಾಮದ ಮಕ್ತುಂಬಿ ಇಸಾಕ್ ಮಕಾನದಾರ್, ಅಲ್ಲಾವುದ್ದೀನ್ ಪೀರಸಾಬ್ ಮಕಾನ್ ದಾರ್ ಹಾಗೂ ಅಕ್ಕಪಕ್ಕದವರ ಮನೆಗಳು ಕುಸಿದು ಬಿದ್ದಿವೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.
ಹಾನಿಗೊಳಗಾದ ಮನೆಗಳಿಗೆ ಅಮ್ಮಿನಬಾವಿ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಹಾನಿ ಪ್ರಮಾಣದ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಅಕಾಲಿಕ ಮಳೆಗೆ ಸೂರು ಕಳೆದುಕೊಂಡ ಸಂತ್ರಸ್ತರು ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ
Kshetra Samachara
09/01/2021 04:20 pm