ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಾಲ್ಕು ಬಾರಿ ಕರಿಶಿದ್ದೇಶ್ವರನ ದರ್ಶನಕ್ಕೆ ಬಂದ ಹಾವುಗಳು

ಕುಂದಗೋಳ : ಪಟ್ಟಣದ ಕಾಳಿದಾಸನಗರದಲ್ಲಿನ ಕರಿಸಿದ್ದೇಶ್ವರ ದೇವಸ್ಥಾನದ ಒಳಗೆ ಒಂದೇ ತಿಂಗಳಲ್ಲಿ ಸತತ ನಾಲ್ಕು ಬಾರಿ ಜೋಡಿ ಹಾವುಗಳು ಬಂದು ಭಕ್ತರಲ್ಲಿ ಆಶ್ಚರ್ಯ ಹುಟ್ಟಿಸಿವೆ.

ಡಿಸೆಂಬರ್ ತಿಂಗಳ ಆರಂಭದಿಂದ ಜನವರಿ ತಿಂಗಳ ಒಳಗೆ ಸತತ ನಾಲ್ಕು ಬಾರಿ ಒಮ್ಮೆ ನಾಗರಹಾವು, ಎರೆಡು ಬಾರಿ ನಾಗರ ಹಾವು ಕೆರೆ ಹಾವು ಒಟ್ಟಿಗೆ ಸೇರಿ ಆಗಮಿಸಿದರೇ ಮತ್ತೋಮ್ಮೆ ನಾಗರ ಹಾವಷ್ಟೇ ದೇವಸ್ಥಾನಕ್ಕೆ ಆಗಮಿಸಿ ಭಕ್ತರನ್ನು ಹುಬ್ಬೆರಿಹುವಂತೆ ಮಾಡಿದ್ದು ಕರಿಸಿದ್ದೇಶ್ವರ ಮೂರ್ತಿಯ ಸುತ್ತ ಸಂಚರಿಸಿ ಮರಳಿವೆ.

ಕುಂದಗೋಳ ಪಟ್ಟಣದ ಸಾರ್ವಜನಿಕರು ಇದು ಕರಿಸಿದ್ದೇಶ್ವರನ ಪವಾಡವೇ ಇರಬೇಕು, ಈ ಹಿಂದೆಯೂ ದೇವಸ್ಥಾನದಲ್ಲಿ ಅಂಬಲಿ ಪವಾಡ ನಡೆದಿತ್ತು ಇದು ಅದರಂತೇ ಇರಬಹುದು ಎಂದು ತರ್ಕಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

06/01/2021 11:34 am

Cinque Terre

36.02 K

Cinque Terre

2

ಸಂಬಂಧಿತ ಸುದ್ದಿ