ಕಲಘಟಗಿ:ತಾಲೂಕಿನ ಮುಕ್ಕಲ್ ರಸ್ತೆಯಲ್ಲಿ ಅಸ್ವಸ್ಥತವಾಗಿ ಬಿದ್ದಿದ್ದ ಮಂಗವನ್ನು ಎತ್ತಿಕೊಂಡು ಬಂದ ಯುವಕರು ಚಿಕಿತ್ಸೆ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಕೂಬ್ಯಾಳ ಗ್ರಾಮದಿಂದ ಮುಕ್ಕಲ್ ಗ್ರಾಮಕ್ಕೆ ಕೆಲಸಕ್ಕೆ ಬಂದಿದ್ದ,ವಿರೇಶ ಹಿರೇಮಠ ಹಾಗೂ ಗಿರೀಶ ಮಂಟೂರ ಎಂಬ ಯುವಕರು ಮರದ ಅಡಿಯಲ್ಲಿ ಅಸ್ವಸ್ಥತವಾಗಿ ಬಿದ್ದ ಮಂಗವನ್ನು ಕಂಡು ನೀರು ಹಾಕಿ ಉಪಚರಿಸಿ,ತಮ್ಮ ದ್ವಿಚಕ್ರ ವಾಹನದಲ್ಲಿ ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದಿದ್ದಾರೆ.
ಡಾ.ಸುರೇಶ ಕಳಸಣ್ಣವರ ವೆಟರ್ನರಿ ಸಿಬ್ಬಂದಿ ಮನಗೂಳಿ ಅವರನ್ನು ಕರೆಸಿ ಚಿಕಿತ್ಸೆ ಒದಗಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
Kshetra Samachara
26/12/2020 05:22 pm