ಕುಂದಗೋಳ : ಎಲ್ಲೆಡೆ ವರುಣನ ಆರ್ಭಟ ಮುಂದುವರೆದಿದ್ದು, ಮತ್ತೆ ಹಳ್ಳಿಗರ ಮನೆಗಳಿಗೆ ರಭಸದಿಂದ ನೀರು ನುಗ್ಗುತ್ತಿದೆ. ಅದರಂತೆ ಭಾನುವಾರ ಸಂಜೆ ಕಡಪಟ್ಟಿಯಲ್ಲಿ ಸುರಿದ ಭಾರಿ ಮಳೆಗೆ ರಸ್ತೆ ಸಂಪೂರ್ಣ ಜಲಾವೃತವಾಗಿ ಗುರುಶಿದ್ಧಪ್ಪ ನಾವಿ ಎಂಬುವವರ ಮನೆಗೆ ನೀರು ನುಗ್ಗಿದ್ದು, ಗಣೇಶ ವಿಸರ್ಜನೆ ಮಾಡುಲು ಮನೆಗೆ ನೀರು ಆವರಿಸಿದಂತೆ ಭಾಸವಾಗಿದ್ದು, ಕುಟುಂಬದವರು ಬದುಕು ಅಕ್ಷರಶಃ ಕಷ್ಟಕ್ಕೆ ಸಿಲುಕಿದ್ದು, ಅಡುಗೆ ಮಾಡಲು ಸ್ಥಳವಿಲ್ಲದಂತಾಗಿದೆ.
ಇನ್ನೂ ಕಡಪಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಇರುವಂತಹ ಕೆಲ ಮನೆಗಳಿಗೆ ನೀರು ನುಗ್ಗಿ ಮಾರಿಯಮ್ಮ ದೇವಸ್ಥಾನದ ಆವರಣ ಸಂಪೂರ್ಣ ಜಲಾವೃತ ಆದರೂ ಯಾವುದೇ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ, ಸದ್ಯ ಮನೆಯಲ್ಲಿ ನೀರು ನುಗ್ಗಿದವರು ಪರ್ಯಾಯ ವ್ಯವಸ್ಥೆಗಾಗಿ ತಡಕಾಟ ನಡೆಸಿದ್ದಾರೆ.
Kshetra Samachara
05/09/2022 01:11 pm