ಕುಂದಗೋಳ : ತಾಲೂಕಿನ ಯಲಿವಾಳ ಗ್ರಾಮದ ಶಿವರಾಜಗೌಡ ಹಿರೇಗೌಡ್ರ ಎಂಬುವವರ ಮನೆಯ ಕಾಂಪೌಂಡ್ ಬಳಿ ಕಟ್ಟಿಗೆ ಬಣವಿಯಲ್ಲಿ ವಾಸವಾಗಿದ್ದ 8 ಪೂಟ್ ಉದ್ದದ ಕೆರೆ ಹಾವನ್ನು ಉರಗ ರಕ್ಷಕ ಮಂಜುನಾಥ ಮೆಣಸಿನಕಾಯಿ ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.
ಹೌದು ! ಇಂದು ಬೆಳಿಗ್ಗೆ ಮಕ್ಕಳು ಆಟ ಆಡುವ ಪ್ರದೇಶದಲ್ಲಿ ಕಾಂಪೌಂಡ್ ಬಳಿ ಕೆರೆ ಹಾವು ಕಾಣಿಸಿಕೊಂಡು ತಕ್ಷಣ ಹತ್ತಿರದ ಕಟ್ಟಿಗೆ ಬಣವಿಗೆ ನುಗ್ಗಿದೆ.
ಹಾವನ್ನು ಕಂಡ ಸ್ಥಳೀಯರು ಉರಗ ರಕ್ಷಕ ಮಂಜುನಾಥ ಮೆಣಸಿನಕಾಯಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಮಂಜುನಾಥ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸದ್ಯ ಸ್ಥಳೀಯರ ಸಮಯ ಪ್ರಜ್ಞೆಯಿಂದ ಹಾವು ಸೆರೆ ಸಿಕ್ಕಿದ್ದು ಹಾವಿನ ರಕ್ಷಣೆ ಮಾಡಲಾಗಿದೆ.
Kshetra Samachara
12/06/2022 01:00 pm