ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅವಿತು ಕುಳಿತ ನಾಗಪ್ಪ : ರಕ್ಷಣೆ ಮಾಡಿದ ಸ್ನೇಕ್ ನಾಗರಾಜ

ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ ಸೋಮಾಪುರ ಗ್ರಾಮದ ಶಿವಲಿಂಗಪ್ಪ ಹುಲಿ ಎಂಬುವರ ಮನೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಾಗರಹಾವೊಂದು ಅಡುಗೆ ಮನೆಯಲ್ಲಿ ಅವಿತು ಕುಳಿತಿತ್ತು.

ಇದರಿಂದಾಗಿ ಕುಟುಂಬಸ್ಥರು ಭಯದಿಂದಲೇ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳೀಯರು ಸ್ನೇಕ್ ನಾಗರಾಜ ಅವರಿಗೆ ಕರೆ ಮಾಡಿ ಹಾವು ಹಿಡಿಯುವಂತೆ ಮನವಿ ಮಾಡಿಕೊಂಡರು, ಸ್ಥಳಕ್ಕೆ ದೌಡಾಯಿಸಿದ ನಾಗರಾಜ ನಾಗರಹಾವು ಹಿಡಿದು ಕುಟುಂಬಸ್ಥರ ಅತಂಕ ದೂರು ಮಾಡಿದ್ದಾರೆ.

ಇನ್ನೂ ನಾಗರಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನೂ ಯಾರು ಸಹ ಹಾವು ಕಂಡರೆ ಅದನ್ನು ಸಾಯಿಸುವ ಕೆಲಸ ಮಾಡಬಾರದು ನನಗೆ ಕರೆ ಮಾಡಿದ್ರೆ ಸಾಕು ನಾನು ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬೀಡುತ್ತೇನೆ ಎಂದರು.

Edited By :
Kshetra Samachara

Kshetra Samachara

04/06/2022 10:54 am

Cinque Terre

32.2 K

Cinque Terre

2

ಸಂಬಂಧಿತ ಸುದ್ದಿ